Site icon PowerTV

ಮಾತು ಬೇಡ ಚುನಾವಣೆಯಲ್ಲಿ ಉತ್ತರ ಕೊಡೋಣ : ಯಂಗ್ ರೆಬಲ್​ಸ್ಟಾರ್ ಕರೆ..!

ಮಂಡ್ಯ : ತಮ್ಮ ವಿರುದ್ಧ ಮಾತನಾಡುವವರಿಗೆ ನಾವು ಮಾತಲ್ಲಿ ಉತ್ತರ ಕೊಡೋದು ಬೇಡ. ಚುನಾವಣೆಯಲ್ಲಿ ಉತ್ತರ ಕೊಡೋಣ ಎಂದು ಯಂಗ್ ರೆಬಲ್​ಸ್ಟಾರ್ ಅಭಿಷೇಕ್ ಅಂಬರೀಶ್ ಮಂಡ್ಯದ ತಮ್ಮ ಜನತೆಗೆ ಕರೆಕೊಟ್ಟಿದ್ದಾರೆ.
ಮಂಡ್ಯದಲ್ಲಿ ನಡೆದ ಸುಮಲತಾ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಮ್ಮ ವಿರುದ್ಧ ಕೇಳಿ ಬರ್ತಾ ಇರೋ ಮಾತುಗಳು ನಮ್ಮ ಗಮನಕ್ಕೂ ಬಂದಿವೆ. ನಾವೂ ಟಿವಿ ನೋಡ್ತಾ ಇರ್ತೀವಿ. ಇಂಥಾ ಮಾತುಗಳು ಕೇಳಿದಾಗ, ನಾನು ಅಮ್ಮ ಬಳಿ ಹೋಗಿ.. ಇವೆಲ್ಲಾ ಬೇಕಾ ಅಮ್ಮ.. ಸುಮ್ಮನೇ ನಾವೂ ಏನಾದ್ರೂ ಹೇಳಿಕೆ ಕೊಡೋಣವೇ ಅಂತ ಕೇಳಿದ್ದೆ. ಆಗ, ಅಮ್ಮ ಹೇಳಿದ್ದು ಒಂದೇ ಮಾತು, ನಾವೇನು ಮಾತಾಡೋದು ಬೇಡ… ಜನರೇ ನಮ್ಮ ಪರ ಮಾತಾಡ್ತಾರೆ. ಜನರೇ ಉತ್ತರ ಕೊಡ್ತಾರೆ ಅಂತ…ನೀವು ನಮ್ಮ ಮೇಲಿಟ್ಟಿರುವ ವಿಶ್ವಾಸದಿಂದ ಇಲ್ಲಿಗೆ ಬಂದಿದ್ದೀವಿ. ಆಶೀರ್ವದಿಸಿ’ ಅಂದರು.
ಅಂಬರೀಶ್ ಅಣ್ಣನ ಬಲ ತೋರಿಸಬೇಕು. ನಾವೇನು ಮಾತಾಡೋದು ಬೇಡ… ರಿಸೆಲ್ಟ್ ದಿನ ಉತ್ತರ ಕೊಡೋಣ. ಅಂಬರೀಶಣ್ಣನ ಕುಟುಂಬ ಅವರ ಅಭಿಮಾನಿಗಳನ್ನು, ಕಾರ್ಯಕರ್ತರನ್ನು ನಂಬಿ ಇಲ್ಲಿಗೆ ಬಂದಿದೆ. ನಮ್ಮ ವಿರುದ್ಧ ಮಾತಾಡುವವರಿಗೆ ಮಾತಿನಲ್ಲಿ ಉತ್ತರ ನೀಡುವುದು ಬೇಡ… ಚುನಾವಣೆಯಲ್ಲಿ ಉತ್ತರ ನೀಡೋಣ ಎಂದರು.

Exit mobile version