Site icon PowerTV

ಅನಿಲ್ ಅಂಬಾನಿ, ನೀರವ್​ಗೆ ಮೋದಿ ಚೌಕಿದಾರ್​ – ರಾಹುಲ್​ ಗಾಂಧಿ

ಕಲಬುರಗಿ: ಜನರು ಮೋದಿ ಅವರನ್ನು ಚೌಕಿದಾರ್​ ಮಾಡಲು ಹೊರಟಿದ್ದಾರೆ. ಮೋದಿ ಅವರು ಅನಿಲ್ ಅಂಬಾನಿ, ನೀರವ್ ಮೋದಿ ಅವರಿಗೆ ಚೌಕಿದಾರ್ ಅಂತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ನೀವೆಲ್ಲ ಹೇಳಿದ್ರಿ ಚೌಕಿದಾರ್ ಚೋರ್ ಹೆ ಅಂತ. ಆದರೆ ಈಗ ನರೇಂದ್ರ ಮೋದಿ ದೇಶದ ಜನತೆಯನ್ನ ಚೌಕಿದಾರ್ ಮಾಡಲು ಹೊರಟಿದ್ದಾರೆ. ಪ್ರಧಾನಿ ಅನಿಲ್ ಅಂಬಾನಿ, ನಿರವ್ ಮೋದಿ ಅಂತವರ ಚೌಕಿದಾರ್ ಕೆಲಸವನ್ನು ಮಾಡಿದ್ದಾರೆ. ರಫೈಲ್ ಹಗರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಹಗರಣ ನಡೆದಿದೆ. ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ್ರೆ, ಜಿಎಸ್​​ಟಿ ಟ್ಯಾಕ್ಸ್ ತೆಗೆಯುವ ಮೂಲಕ ದೇಶದ ಎಲ್ಲಾ ವರ್ಗಕ್ಕೆ ಅನೂಕೂಲ ಮಾಡಲಾಗುವುದು” ಅಂತ ಹೇಳಿದ್ರು.

ಲೋಕಸಭಾ ಚುನಾವಣೆ ಬಗ್ಗೆ ಮಾತನಾಡಿ, “ಕರ್ನಾಟಕಾದಲ್ಲೀಗ ಸಮ್ಮಿಶ್ರ ಸರ್ಕಾರ ಒಂದಾಗಿ ಲೋಕಸಭಾ ಚುನಾವಣೆ ಎದುರಿಸಲಿದ್ದೇವೆ. ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ ಅಂತಾ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಬಂದು ಸುಳ್ಳು  ಹೇಳ್ತಾರೆ. ಧರ್ಮ ಧರ್ಮಗಳ ಮಧ್ಯೆ ಜಗಳ ತಂದಿಡುವ ಕೆಲಸ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ ಎಸ್ ಎಸ್ ದೇಶದ ಸಂವಿಧಾನವನ್ನು ರದ್ದು ಮಾಡಲು ಹೋರಟಿದ್ದಾರೆ. ಹಾಗಾಗಲು ನಾವು ಬಿಡುವದಿಲ್ಲ” ಅಂತ ಹೇಳಿದ್ರು.

Exit mobile version