Site icon PowerTV

ಎ.ಮಂಜು ಮನವೊಲಿಕೆಗೆ ಮುಂದಾದ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್​ ನಾಯಕ ಎ. ಮಂಜು ಬಿಜೆಪಿ ಸೇರುತ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಎ.ಮಂಜು ಮನವೊಲಿಕೆಗೆ ಪ್ರಯತ್ನಿಸಿದ್ದಾರೆ. ಎ. ಮಂಜು ಅವರಿಗೆ ಕರೆ ಮಾಡಿರುವ ಸಿದ್ದರಾಮಯ್ಯ ಅವರು, “ಬಿಜೆಪಿ ಸೇರುವ ನಿರ್ಧಾರ ತಗೋಬೇಡ. ಬಿಜೆಪಿಗೆ ಹೋದರೆ ರಾಜಕೀಯ ಭವಿಷ್ಯ ಹಾಳಾಗುತ್ತೆ. ಅಲ್ಲೂ ಇಲ್ಲ, ಇಲ್ಲೂ ಇಲ್ಲ ಅನ್ನುವ ಸ್ಥಿತಿ ತಂದುಕೊಳ್ಳಬೇಡ” ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಎ.ಮಂಜುಗೆ ಫೋನ್ ಮೂಲಕ ಬುದ್ಧಿ ಮಾತು ಹೇಳಿ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ.

ಬಿಜೆಪಿ ಸೇರ್ಪಡೆ ಬಗ್ಗೆ ಸಿದ್ದರಾಮಯ್ಯಗೆ ಖಚಿತ ಪಡಿಸಿದ ಎ.ಮಂಜು, “ಮೊಮ್ಮಗನನ್ನು ನಿಲ್ಲಿಸುವ ದೇವೇಗೌಡರ ನಿರ್ಧಾರ ಸರಿಯಲ್ಲ. ಆಗಿನಿಂದಲೂ ಜೆಡಿಎಸ್ ವಿರುದ್ಧವೇ ಹೋರಾಡಿಕೊಂಡು ಬಂದವರು ನಾವು. ಈಗ ಪ್ರಜ್ವಲ್ ಪರ‌ ಮತ ಕೇಳಲು ಹೋದರೆ ಜನ ಏನನ್ನಲ್ಲ? ಜೆಡಿಎಸ್​​ನವರಿಗೆ ಬುದ್ಧಿ ಕಲಿಸೋದಿಕ್ಕೆ ಇದೇ ಒಳ್ಳೇ ಅವಕಾಶ” ಅಂತ ಸಿದ್ದರಾಮಯ್ಯಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

Exit mobile version