Site icon PowerTV

ಮಂಡ್ಯದಲ್ಲಿ ಮುಂದುವರಿದ ಸ್ಟಾರ್ ವಾರ್​..!

ಮಂಡ್ಯ: ಲೋಕಸಭಾ ಚುನಾವಣಾ ದಿನಾಂಕ ನಿಗದಿಯಾಗಿರೋ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕೇತ್ರದಲ್ಲಿ ಸ್ಟಾರ್​ ವಾರ್​ ಜೋರಾಗಿದೆ. ಇಂದು ಸುಮಲತಾ ಅಂಬರೀಶ್ ಅವರು ಕ್ಷೇತ್ರ ಪ್ರವಾಸ ನಡೆಸಲಿದ್ದು, ಇತ್ತ ನಿಖಿಲ್ ಕುಮಾರಸ್ವಾಮಿ ಅವರೂ ಪ್ರವಾಸ ಆರಂಭಿಸಲಿದ್ದಾರೆ. ದೋಸ್ತಿ ಅಭ್ಯರ್ಥಿ ನಿಖಿಲ್ ಹಾಗೂ ಸುಮಲತಾ ಅವರೂ ಕ್ಷೇತ್ರದಲ್ಲಿಂದು ಮತಬೇಟೆ ನಡೆಸಲಿದ್ದಾರೆ.

ರಣಕಣದಲ್ಲಿ ಸ್ಟಾರ್​ ವಾರ್​ ಜೋರಾಗಿದ್ದು ಸುಮಲತಾ ಅವರು ಮೈಸೂರು ಜಿಲ್ಲೆಯ ಕೆ.ಆರ್.ನಗರ ವಿಧಾನಸಭಾ ವ್ಯಾಪ್ತಿಯಲ್ಲಿ ಸಂಚಾರ ನಡೆಸಿ, ಮತಬೇಟೆ ನಡೆಸಲಿದ್ದಾರೆ. ಹಾಗೆಯೇ ಧಾರ್ಮಿಕ ಕ್ಷೇತ್ರಗಳಾದ ಕಪ್ಪಡಿ, ಚುಂಚನಕಟ್ಟೆಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಇದೇ ಸಂದರ್ಭ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸುಮಲತಾ ಮತಬೇಟೆ ನಡೆಸಲಿದ್ದು, ಜೆಡಿಎಸ್ ಅಭ್ಯರ್ಥಿ ನಿಖಿಲ್​ ಗೌಡ ಅವರೂ ಕ್ಷೇತ್ರದಲ್ಲಿ ಪ್ರವಾಸ ಆರಂಭಿಸಲಿದ್ದಾರೆ.

Exit mobile version