Site icon PowerTV

ಕಣ್ಣೀರು ಹಾಕೋದನ್ನು ನೀತಿ ಸಂಹಿತೆ ಅಡಿಯಲ್ಲಿ ತರಬೇಕು : ಹೆಚ್​ಡಿಡಿ ಕುಟುಂಬದ ಬಗ್ಗೆ ನೆಟ್ಟಿಗರ ವ್ಯಂಗ್ಯ..!

ಹಾಸನ : ಪ್ರಜ್ವಲ್​ ರೇವಣ್ಣ ಅವರ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಸಚಿವ ಹೆಚ್.ಡಿ ರೇವಣ್ಣ ಹಾಗೂ ಸ್ವತಃ ಪ್ರಜ್ವಲ್ ರೇವಣ್ಣ ಅವರು ಕಣ್ಣೀರಿಟ್ಟ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
ಹೆಚ್​ಡಿಡಿ ಕುಟುಂಬದ ಕಣ್ಣೀರಧಾರೆ ವಿಚಾರವನ್ನಿಟ್ಟುಕೊಂಡು ನೆಟ್ಟಿಗರು ವಿವಿಧ ರೀತಿಯ ವ್ಯಂಗ್ಯ ಪೋಸ್ಟ್​​ಗಳನ್ನು ಮಾಡ್ತಿದ್ದಾರೆ. ಗಂಡು ಮೆಟ್ಟಿದ ನಾಡಲ್ಲಿ ಗಂಡಸರು ಅಳುವ ಕಾರ್ಯಕ್ರಮ. ರಾಜ್ಯದ ಬರ ನೀಗಿಸಿದ ದೇವೇಗೌಡರ ಕುಟುಂಬದ ಕಣ್ಣೀರು..! ಕಣ್ಣೀರಿನ ಕೋಡಿ ನದಿಯಾಗಿ ಹರಿಯುವುದರಿಂದ ಜನತೆ ಕೊಚ್ಚಿ ಹೋಗುವ ಸಾಧ್ಯತೆ ಇದೆ.. ಜನತೆ ಎತ್ತರದ ಪ್ರದೇಶಗಳಿಗೆ ತೆರಳಬೇಕಾಗಿ ವಿನಂತಿ ಎಂಬ ಅನೇಕ ರೀತಿಯ ಪೋಸ್ಟ್​​ಗಳು ವೈರಲ್ ಆಗುತ್ತಿವೆ… ಕಣ್ಣೀರು ಹಾಕೋದನ್ನು ನೀತಿ ಸಂಹಿತೆ ಅಡಿಯಲ್ಲಿ ತರಬೇಕು. ಇದು ಚುನಾವಣೆಯ ಟ್ರೇಲರ್ ಮಾತ್ರ ಎಂದು ನೆಟ್ಟಿಗರು ವ್ಯಂಗ್ಯವಾಗಿದ್ದಾರೆ. ವಿಕ್ಸ್ ಡಬ್ಬಿಯನ್ನು ಪೋಸ್ಟ್ ಮಾಡಿಯೂ ಟ್ರೋಲ್ ಮಾಡಲಾಗುತ್ತಿದೆ..!

 

Exit mobile version