Site icon PowerTV

ನಿಖಿಲ್ ಹೆಸರನ್ನು ಘೋಷಿಸಿದ ಸಚಿವರು ; ದೇವೇಗೌಡರೇಕೆ ನಿಖಿಲ್​ ಹೆಸರನ್ನು ಘೋಷಿಸಲಿಲ್ಲ..?

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯಾಗಿ ನಿಖಿಲ್​ ಕುಮಾರಸ್ವಾಮಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಸಚಿವರಾದ ಡಿ.ಸಿ ತಮ್ಮಣ್ಣ ಮತ್ತು ಸಿ.ಎಸ್​ ಪುಟ್ಟರಾಜು ಅವರು ನಿಖಿಲ್​ ಕುಮಾರಸ್ವಾಮಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ರು.
ನಿನ್ನೆ ಹಾಸನದಲ್ಲಿ ಪ್ರಜ್ವಲ್​ ರೇವಣ್ಣ ಅವರ ಹೆಸರನ್ನು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರೇ ಘೋಷಿಸಿದ್ದರು. ಆದರೆ, ನಿಖಿಲ್ ಅವರ ಹೆಸರನ್ನು ಏಕೆ ಘೋಷಿಸಲಿಲ್ಲ..! ಪ್ರಜ್ವಲ್​ ರೇವಣ್ಣ ಅವರ ಹೆಸರನ್ನು ಘೋಷಿಸುವ ವೇಳೆ ದೇವೇಗೌಡರು ಭಾವುಕರಾಗಿದ್ದರು. ಸಚಿವ ಹೆಚ್​.ಡಿ ರೇವಣ್ಣ, ಶಾಸಕ ಬಾಲಕೃಷ್ಣ ಮತ್ತು ಸ್ವತಃ ಪ್ರಜ್ವಲ್​ ಅವರೂ ಕಣ್ಣೀರಿಟ್ಟಿದ್ದರು. ಹಾಗಾಗಿ ಇಂದು ದೇವೇಗೌಡರು ನಿಖಿಲ್ ಅವರ ಹೆಸರನ್ನು ಘೋಷಿಸಲಿಲ್ಲವೇ ಎಂಬ ಪ್ರಶ್ನೆ ಮೂಡಿದೆ.
ನಿನ್ನೆ ದೇವೇಗೌಡರ ಕುಟುಂಬ ಕಣ್ಣೀರಿಟ್ಟಿರೋದು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇದೇ ಕಾರಣಕ್ಕೆ ಇಂದು ನಿಖಿಲ್ ಅವರ ಹೆಸರನ್ನು ಗೌಡರು ಘೋಷಿಸಿಲ್ಲ ಎಂದು ಹೇಳಲಾಗುತ್ತಿದೆ.

Exit mobile version