Site icon PowerTV

ಬಿಜೆಪಿಗೆ ಬನ್ನಿ, ಗೆಲ್ಲಿಸಿ ಪಾರ್ಲಿಮೆಂಟ್​ಗೆ ಕಳಿಸ್ತೀವಿ: ಮಂಜುಗೆ ರಾಜ್​ಕುಮಾರ್ ಆಹ್ವಾನ..!

ಹಾಸನ: ಬಿಜೆಪಿಗೆ ಬನ್ನಿ, ಗೆಲ್ಲಿಸಿ ಪಾರ್ಲಿಮೆಂಟ್​ಗೆ ಕಳುಹಿಸ್ತೇವೆ ಅಂತ ಅರಸೀಕೆರೆ ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ರಾಜ್​​ಕುಮಾರ್ ಹೇಳಿದ್ದಾರೆ.

ಎ.ಮಂಜು ಹಳಸಿದ ಅನ್ನ ಎಂದು ಬಿಜೆಪಿ  ಜಿಲ್ಲಾಧ್ಯಕ್ಷ ಯೋಗಾ ರಮೇಶ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ ಕುಮಾರ್​ ಅವರು, “ಯೋಗಾ ರಮೇಶ್ ಹಿಟ್ಲರ್ ಸಂಸ್ಕೃತಿಯ ವ್ಯಕ್ತಿ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ನೀವು ಬಿಜೆಪಿಗೆ ಬನ್ನಿ. ಗೆಲ್ಲಿಸಿ ಪಾರ್ಲಿಮೆಂಟ್​ಗೆ ಕಳಿಸ್ತೀವಿ” ಅಂತ ಕೈ ನಾಯಕ ಎ.ಮಂಜುರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಎ. ಮಂಜು ಅವರು ಬಿಜೆಪಿ ಸೇರ್ಪಡೆಯಾಗೋ ಕುರಿತು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧದ ನಡುವೆಯೂ ಬಿಜೆಪಿ ಸೇರೋದಕ್ಕೆ ಮಂಜು ಅವರ ಎಲ್ಲ ಸಿದ್ಧತೆಯನ್ನೂ ನಡೆಸಿದ್ದಾರೆ.

Exit mobile version