Site icon PowerTV

ಈಶ್ವರಪ್ಪ ರಾಜೀನಾಮೆ ಕೊಡ್ತಾರಂತೆ, ಸಿದ್ದರಾಮಯ್ಯ ಅವರೂ ರಿಸೈನ್ ಮಾಡ್ಬೇಕಂತೆ..!

ಹಾವೇರಿ : ‘ನಾನು ಶಿವಮೊಗ್ಗದಲ್ಲಿ ರಾಜೀನಾಮೆ ಕೊಡ್ತೀನಿ, ಸಿದ್ದರಾಮಯ್ಯ ಅವರೇ ನೀವೂ ರಿಸೈನ್​ ಮಾಡಿ. ಇಬ್ಬರೂ ಪುನಃ ಕಣಕ್ಕಿಳಿಯೋಣ’ ಅಂತ ಬಿಜೆಪಿ ಮುಖಂಡ, ಶಾಸಕ ಕೆ.ಎಸ್​ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ, ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಅವರಿಗೆ ಪಂಥಾಹ್ವಾನ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಈಶ್ವರಪ್ಪ ಸ್ಪರ್ಧಿಸಿದ್ರೆ ಸಾಮಾನ್ಯ ವ್ಯಕ್ತಿಯನ್ನು ನಿಲ್ಲಿಸ್ತೀವಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಈಶ್ವರಪ್ಪ, ”ಸಿದ್ದರಾಮಯ್ಯ ಬೊಗಳೆ ಹೊಡೆಯೊನು, ಪುಂಗಿದಾಸ ಎಂದು ರಾಜ್ಯದ ಜನ ತಿರ್ಮಾನ ಮಾಡಿದ್ದಾರೆ. ನೀವು ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ಕೊಡಿ. ನಾನು ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ಕೊಡ್ತೀನಿ. ಶಿವಮೊಗ್ಗ ಕ್ಷೇತ್ರಕ್ಕೆ ನಾನು ನಿಲ್ಲುತ್ತೇನೆ. ಬಾದಾಮಿ ಕ್ಷೇತ್ರಕ್ಕೆ ನೀವು ನಿಲ್ಲಿ. ಬಾದಾಮಿ ಕ್ಷೇತ್ರಕ್ಕೆ ನಮ್ಮ ಅಭ್ಯರ್ಥಿ ಹಾಕ್ತಿವಿ. ಶಿವಮೊಗ್ಗ ಕ್ಷೇತ್ರಕ್ಕೆ ನೀವು ಯಾರನ್ನಾದ್ರೂ ಹಾಕಿ.ಎರಡು ಕ್ಷೇತ್ರದಲ್ಲಿ ನಾವು ಗೆಲ್ಲದಿದ್ದರೆ ನಾನು ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ’ ಎಂದಿದ್ದಾರೆ.

Exit mobile version