Site icon PowerTV

ಸುಮಲತಾ ಸ್ಪರ್ಧೆ ಮಾಡಿದ್ರೆ ರೇವಣ್ಣ ಅವರಿಗೇನು ತೊಂದ್ರೆ? : ಶೆಟ್ಟರ್​

ಹುಬ್ಬಳ್ಳಿ : ಸಮಲತಾ ಸ್ಪರ್ಧೆ ಮಾಡಿದ್ರೆ ರೇವಣ್ಣ ಅವರಿಗೇನು ತೊಂದರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್​ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ದೇವೇಗೌಡರ ಮನೆತನದ ವಿರುದ್ಧ ಯಾರೇ ಸ್ಪರ್ಧೆ ಮಾಡಿದ್ರೂ ಅವರನ್ನ ತುಳಿಯುತ್ತಾರೆ. ಸುಮಲತಾ ಬಗ್ಗೆ ರೇವಣ್ಣ ಬಹಳ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಇದು ಪ್ರಜಾಪ್ರಭುತ್ವ, ಸುಮಲತಾ ಅವರಿಗೆ ಸ್ಪರ್ಧೆ ಮಾಡುವ ಹಕ್ಕಿದೆ. ಸುಮಲತಾ ಸ್ಪರ್ಧೆ ಬಗ್ಗೆ ಕೀಳು ಮಟ್ಟದ ಹೇಳಿಕೆ ‌ನೀಡಬಾರದು. ಸುಮಲತಾ ಸ್ಪರ್ಧೆ ಮಾಡಿದ್ರೆ ರೇವಣ್ಣರಿಗೆ ಏನು ತೊಂದರೆ ಎಂದು ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 

Exit mobile version