Site icon PowerTV

ಕಣ್ಣೀರಿಟ್ಟು ‘ಕುಟುಂಬ ರಾಜಕಾರಣ’ದ ಬಗ್ಗೆ ಸುಮಲತಾ ಹೇಳಿದ್ದೇನು?

ಮಂಡ್ಯ : ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ರೆಡಿಯಾಗಿರುವ ಸಮಲತಾ ಅಂಬರೀಶ್ ವೇದಿಕೆಯಲ್ಲಿ ಗದ್ಗದಿತರಾಗಿದ್ದಾರೆ.
ಮಳವಳ್ಳಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬರೀಶ್ ಅವರನ್ನು ನೆನೆದು ಭಾವುಕರಾದರು. ‘ಅಂಬರೀಶ್ ಅವರು ಕುಟುಂಬ ರಾಜಕಾರಣ ಮಾಡಲಿಲ್ಲ’ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
‘ಅಂಬಿ ಇದ್ದಾಗ ಸಂಬಂಧಿಕರು ಅಂತ ಬರುತ್ತಿದ್ದರು. ಈಗ ಅವರು ಫೋನ್​ ಮಾಡಿಯೂ ಮಾತನಾಡಿಸುತ್ತಿಲ್ಲ’ ಎಂದು ಪರೋಕ್ಷವಾಗಿ ಸಚಿವ ಡಿ.ಸಿ ತಮ್ಮಣ್ಣ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು. ಅಂಬಿ ಬಗ್ಗೆ ಒಂದು ಮಾತು ಹೇಳಿದರೆ ನನ್ನಿಂದ ಸಹಿಸಿಕೊಳ್ಳೋಕೆ ಆಗಲ್ಲ. ನಾವು ಯಾರಿಗೂ ಉತ್ತರ ಕೊಡೋ ಅಗ್ಯವಿಲ್ಲ. ಚುನಾವಣೆ ಬಂದಾಗ ಉತ್ತರ ಕೊಡಿ’ ಎಂದು ಜನತೆಯಲ್ಲಿ ಕೇಳಿಕೊಂಡರು.

Exit mobile version