Site icon PowerTV

ಜೆಡಿಎಸ್​ ಅಂದ್ರೆ ‘ಜಸ್ಟ್​ ಫಾರ್ ದೇವೇಗೌಡ & ಸನ್ಸ್ – ಸೋಶಿಯಲ್ ಮೀಡಿಯಾದಲ್ಲಿ ಗೋ ಬ್ಯಾಕ್​ ನಿಖಿಲ್ ಕ್ಯಾಂಪೇನ್​..!

ಮಂಡ್ಯ ಲೋಕಸಭಾ ಚುನಾವಣಾ ಕ್ಷೇತ್ರ ದಿನೇ ದಿನೇ ರಂಗೇರುತ್ತಿದೆ. ನಿಖಿಲ್​ ಕುಮಾರಸ್ವಾಮಿ ಮತ್ತು ಸುಮಲತಾ ಅವರ ಸ್ಪರ್ಧೆಯಿಂದ ಮಂಡ್ಯದಲ್ಲಿ ಸ್ಟಾರ್ ವಾರ್ ಫಿಕ್ಸ್ ಆಗಿದೆ. ಈ ನಡುವೆ ನಿಖಿಲ್ ಸ್ಪರ್ಧೆಗೆ ವಿರೋಧ ಹೆಚ್ಚಿದೆ.
ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಜನಾಕ್ರೋಶ ವ್ಯಕ್ತವಾಗಿದೆ. ವಿವಿಧ ರೀತಿಯ ಪೋಸ್ಟ್​ಗಳ ಮೂಲಕ ನೆಟ್ಟಿಗರು ನಿಖಿಲ್​ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಗೋ ಬ್ಯಾಕ್​ ನಿಖಿಲ್, ಅಂಬಿ ಫ್ಯಾಮಿಲಿಗೆ ಸಪೋರ್ಟ್ ಅನ್ನೋ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ‘ಜೆಡಿಎಸ್​ ಅಂದ್ರೆ ಜಸ್ಟ್​ ಫಾರ್ ದೇವೇಗೌಡ & ಸನ್ಸ್​​. ಮಂಡ್ಯದಲ್ಲಿ ಜನತಾದಳಕ್ಕೆ ಬುನಾದಿ ಹಾಕಿದ ಎಸ್. ಡಿ. ಜೆ ಪುತ್ರನ ರಾಜಕೀಯ ಪ್ರವೇಶಕ್ಕೆ ಅಡ್ಡಿಯಾದ ವಯಸ್ಸು ಮೊಮ್ಮಕ್ಕಳಿಗೇಕಿಲ್ಲಾ?’ ಎಂದು ಮತದಾರರು ಪ್ರಶ್ನಿಸುತ್ತಿದ್ದಾರೆ.
‘ಮಂಡ್ಯಕ್ಕೆ 5 ಸಾವಿರ ಕೋಟಿ ರೂ ಅನುದಾನ ಯಾಕೆ ಅಂತ ಇವಾಗ ಗೊತ್ತಾಗಿರಬೇಕು. ಅಭಿವೃದ್ದಿ ಹೆಸರಿನಲ್ಲಿ ಮಗನನ್ನ ಗೆಲ್ಲಿಸಿಕೊಳ್ಳುವ ತವಕ. ಅಮ್ಮ ರಾಮನಗರ, ಅಪ್ಪ ಚನ್ನಪಟ್ಟಣ, ಮಗ ಮಂಡ್ಯ. ಬೆಂಗಳೂರಿಂದ ಮೈಸೂರುವರೆಗೂ ಇವರ ಕುಟುಂಬವೇ ಆದ್ರೆ ಕಾರ್ಯಕರ್ತ ಏನ್ ಮಾಡೋದು?ಗೆಣಸು ಕೀಳೋದಾ?’ ಅಂತ ಆಕ್ರೋಶ ವ್ಯಕ್ತಪಡಿಸಿ ಒಂದಿಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಗೋ ಬ್ಯಾಕ್​ ನಿಖಿಲ್ ಕ್ಯಾಂಪೇನ್ ಶುರುಮಾಡಿದ್ದಾರೆ.

Exit mobile version