Site icon PowerTV

‘ಈಯಮ್ಮ ಎಷ್ಟು ಜನರನ್ನು ಮಾತಾಡಿಸಿದ್ದಾರೆ’? : ಸುಮಲತಾ ವಿರುದ್ಧ ಡಿ.ಸಿ ತಮ್ಮಣ್ಣ ವಾಗ್ದಾಳಿ

ಮದ್ದೂರಿ : ಸುಮಲತಾ ಅಂಬರೀಶ್​ ವಿರುದ್ಧ ಸಚಿವ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದ್ದಾರೆ. ಮದ್ದೂರಿನ ಕೊಳಗೆರೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಅಂಬರೀಶ್ ಶಾಸಕ, ಸಚಿವರಾದಾಗ ಎಷ್ಟೋ ಜನರ ಮನೆಗೆ ಹೋಗುತ್ತಿದ್ರು’ ಅವರಲ್ಲಿ ಎಷ್ಟು ಜನರನ್ನ ಈಯಮ್ಮ ಮಾತಾಡಿಸಿದ್ದಾರೆ’ ಎಂದು ಸುಮಲತಾ ಅವರ ವಿರುದ್ಧ ಕಿಡಿಕಾರಿದರು.
ಅಂಬರೀಶ್ ಅವರು ಮನೆಗೆ ಬಂದವರಿಗೆ ನೀರು ಕೊಟ್ಟು, ನಿಂದು ಯಾವೂರಪ್ಪಾ? ಏನ್​ ನಿನ್ನ ಸಮಸ್ಯೆ ಅಂತ ಕೇಳುತ್ತಿದ್ದರು. ಇವತ್ತು ಅವರ ಹೆಸರು ಹೇಳಿಕೊಂಡು ಬಂದು ನಾನೇನೋ ಉದ್ಧಾರ ಮಾಡ್ತೀನಿ ಅಂತಿದ್ದಾರೆ. ಬಣ್ಣದವರ ಮಾತಿಗೆ ಜಿಲ್ಲೆಯ ಜನರ್ಯಾರು ಬೆರಗು ಆಗೋದು ಬೇಡ. ಯಾರಿಗೆ ಈ ಸಮಾಜದ ಬಗ್ಗೆ ಚಿಂತನೆ ಇದೆ, ಸದಾ ರೈತರ ಬಗ್ಗೆ ಚಿಂತೆ ಮಾಡ್ತಾರೆ ಅನ್ನೋದನ್ನು ನೋಡಿ. ಯಾರು ನಮಗೆ ಸ್ಪಂದಿಸ್ತಾರೆ, ನಮ್ಮ ಜೊತೆಗೆ ನಿಲ್ತಾರೆ ಎಂದು ಅರಿತು ಆಯ್ಕೆ ಮಾಡಿ ಎಂದು ಹೇಳಿದ್ದಾರೆ.

Exit mobile version