Site icon PowerTV

ಸಿದ್ದರಾಮಯ್ಯಗೆ ಬಿಜೆಪಿ ಟಾಂಗ್ – ವೈರಲ್ ಆಯ್ತು ರಾಹುಲ್​ ಗಾಂಧಿ, ಸೋನಿಯಾ ಗಾಂಧಿ ತಿಲಕ ಇಟ್ಟಿರೋ ಫೋಟೋ..!

ತಿಲಕ ಇಡೋರನ್ನು ಕಂಡ್ರೆ ನಂಗೆ ಭಯ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.
ಇದಕ್ಕೆ ಪ್ರತಿಯಾಗಿ ಬಿಜೆಪಿ, ‘ಕರ್ನಾಟಕದಲ್ಲಿ ಒಬ್ಬರು ಬಿಳಿ ಅಂಗಿ, ಬಿಳಿ ಪಂಚೆ ತೊಟ್ಟ ಮಾಜಿ ಮುಖ್ಯಮಂತ್ರಿ ಒಬ್ಬರು ಇದ್ದಾರೆ. ನೋಡೋಕೆ ತುಂಬಾ ಸಂಭಾವಿತರ ರೀತಿ ಕಾಣುತ್ತಾರೆ. ಆದರೆ, ಸಭೆ ಸಮಾರಂಭಗಳಲ್ಲಿ ದುಶ್ಯಾಸನ ತರ ಹೆಣ್ಣು ಮಕ್ಕಳ ಸೆರಗು ಎಳೆಯುತ್ತಾರೆ, ಸಾಮನ್ಯರ ತರ ಕಾಣುತ್ತಾರೆ. ಆದರೆ, ಕೋಟಿ ಬೆಲೆ ಬಾಳೋ ವಾಚ್​ ಕಟ್ಟುತ್ತಾರೆ. ಯಾರಿವರು ಗೊತ್ತೇ..?’ ಎಂದು ಟ್ವೀಟ್​ ಮಾಡಿದೆ.
ಅಷ್ಟೇ ಅಲ್ಲದೆ ಬಿಜೆಪಿ ತಿಲಕ ಸೆಲ್ಫಿ ಅಭಿಯಾನವನ್ನು ಆರಂಭಿಸಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ತಿಲಕ ಇಟ್ಟಿರೋ ಫೋಟೋ ವೈರಲ್ ಆಗಿದೆ. ಈ ಮೂಲಕ ಬಿಜೆಪಿ ಸಿದ್ದರಾಮಯ್ಯ ಅವರಿಗೆ ಟಾಂಗ್​ ಕೊಟ್ಟಿದೆ.

‘ತಿಲಕ ಇಡುವ ಬಿಜೆಪಿಯ ಓರ್ವ ಸಿಎಂ ವಿರುದ್ಧ ಅನೇಕ ಕ್ರಿಮಿನಲ್​ ಪ್ರಕರಣಗಳಿವೆ’ ಎಂದು ಸಿದ್ದರಾಮಯ್ಯ ಹೇಳಿದ್ದರು. ‘ಉತ್ತರ ಪ್ರದೇಶದಲ್ಲೊಬ್ಬರು ಮುಖ್ಯಮಂತ್ರಿ ಇದ್ದಾರೆ. ಮೈತುಂಬಾ ಕಾವಿ ಬಟ್ಟೆ, ಮುಖ ತುಂಬಾ ಕುಂಕುಮ ಬಳಿದುಕೊಳ್ಳುತ್ತಾರೆ. ಆದರೆ, ಅವರ ವಿರುದ್ಧ ಹತ್ತಾರು ಕ್ರಿಮಿನಲ್​ ಕೇಸ್​ಗಳಿವೆ. ಈ ಕುಂಕುಮಧಾರಿಯನ್ನು ನೋಡಿದಾಗ ಜನರಿಗೆ ಭಯ ಹುಟ್ಟದೆ, ಗೌರವ ಹುಟ್ಟುತ್ತಾ?’ ಎಂದು ಸಿದ್ದರಾಮಯ್ಯ ಟ್ವೀಟ್​ ಕೂಡ ಮಾಡಿದ್ರು.

Exit mobile version