Site icon PowerTV

‘ಕರ್ನಾಟಕದಲ್ಲಿರೋದು ರೈತ ವಿರೋಧಿ ಸರ್ಕಾರ’ : ಕಲಬುರಗಿಯಲ್ಲಿ ಮೋದಿ ರಣಕಹಳೆ

ಕಲಬುರಗಿ: ಸೋಲಿಲ್ಲದ ಸರದಾರ ಸಂಸದ ಮಲ್ಲಿಕಾರ್ಜುನ ಖರ್ಗೆಯವರ ಕ್ಷೇತ್ರ ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಲೋಕ’ಸಮರದ ರಣಕಹಳೆ ಮೊಳಗಿಸಿದ್ದಾರೆ. ಇಂದು ನಡೆದ ಬಿಜೆಪಿ ಬೃಹತ್​ ಸಮಾವೇಶದಲ್ಲಿ ಅವರು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ವಿರುದ್ಧ ಹರಿತವಾದ ಮಾತುಗಳಿಂದ ವಾಗ್ದಾಳಿ ನಡೆಸಿದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದು, “ರಿಮೋಟ್​ ಮೂಲಕ ಕಾರ್ಯ ನಿರ್ವಹಿಸುವ ರಾಜ್ಯದ ಸಿಎಂ ಕೇಂದ್ರಕ್ಕೆ ಸಾಲಮನ್ನಾ ವಿಚಾರವಾಗಿ ರೈತರ ಮಾಹಿತಿ ನೀಡಿಲ್ಲ. ರೈತ ವಿರೋಧಿ ಸರ್ಕಾರ ಬೆಂಗಳೂರಲ್ಲಿ ಕುಳಿತಿದೆ. ನರೇಂದ್ರ ಮೋದಿ ನೇರವಾಗಿ ರೈತರ ಖಾತೆಗೆ ದುಡ್ಡು ಹಾಕುತ್ತಿರುವುದು ಇವರಿಗೆ ಸಂಕಷ್ಟ ತಂದಿಟ್ಟಿದೆ. ಕರ್ನಾಟಕದ ರೈತರಿಗೆ ಇಲ್ಲಿನ ಸರ್ಕಾರ ಅನ್ಯಾಯ ಮಾಡುತ್ತಿದೆ. ಭ್ರಷ್ಟಾಚಾರ ಮತ್ತು ಕುಟುಂಬ ಆಡಳಿತ ನಡೆಸುವುದೇ ಇವರ ಮಂತ್ರವಾಗಿದೆ. ಮತ ಪಡೆಯುವುದಕ್ಕೆ ಮಾತ್ರ ಇವರು ರೈತರ ಹೆಸರು ಸ್ಮರಿಸುತ್ತಾರೆ” ಅಂತ ಟೀಕಾ ಪ್ರಹಾರ ನಡೆಸಿದರು.

“ದೇಶದ 12 ಕೋಟಿ ರೈತ ಕುಟುಂಬಗಳಿಗೆ ಪ್ರಧಾನಮಂತ್ರಿ ‘ಕಿಸಾನ್​ ಸಮ್ಮಾನ್​ ಯೋಜನೆ’ ಲಾಭ ತಂದಿದೆ. ರೈತರ ಖಾತೆಗಳಿಗೆ ನೇರವಾಗಿ ಕೇಂದ್ರ ಸರ್ಕಾರ ಪ್ರತಿ ವರ್ಷ ದುಡ್ಡು ಹಾಕಲಿದೆ. ದೇಶದ ಕೋಟಿ ಕೋಟಿ ರೈತರಿಗೆ ಈ ಯೋಜನೆಯ ಲಾಭ ಈಗಾಗ್ಲೆ ಸಿಕ್ಕಿದೆ. ಕರ್ನಾಟಕದ 71 ಲಕ್ಷ ರೈತರಿಗೂ ಈ ಯೋಜನೆಯ ಲಾಭ ಸಿಗಲಿದೆ. ಕರ್ನಾಟಕದ 71 ಲಕ್ಷ ರೈತರಿಗೂ ಈ ಯೋಜನೆಯ ಲಾಭ ಸಿಗಲಿದೆ” ಎಂದರು.

Exit mobile version