Site icon PowerTV

ಲೋಕಸಭಾ ಚುನಾವಣಾ ಪ್ರಚಾರಕ್ಕಿಳಿದ ಕ್ರಿಕೆಟರ್ ಜಡೇಜಾ ಪತ್ನಿ..!

ಅಹಮದಾಬಾದ್ : ಟೀಮ್​ ಇಂಡಿಯಾದ ಸ್ಟಾರ್ ಪ್ಲೇಯರ್ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.
ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡ ರಿವಾಬಾ ಅವರು ಕಾರ್ಣಿ ಸೇನಾದ ಮಹಿಳಾ ಘಟಕದ ಮುಖ್ಯಸ್ಥೆ. ಕಳೆದ ವಿಧಾನಸಭಾ ಚುನಾವಣೆ ವೇಳೆಯೇ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟಿದ್ದರು. ಈಗ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಅಷ್ಟೇ ಅಲ್ಲದೆ ಅವರು ಬಿಜೆಪಿಯ ಟಿಕೆಟ್​ ಆಕಾಂಕ್ಷಿ ಕೂಡ ಎಂದು ಹೇಳಲಾಗುತ್ತಿದೆ.
ಬಿಜೆಪಿ ಸೇರಿರುವ ರಿವಾಬಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೂ ಸ್ಟಾರ್ ಪ್ರಚಾರಕಿಯಾಗಿ ಪಕ್ಷಕ್ಕೆ ನೆರವಾಗಲಿದ್ದಾರೆ. ರವೀಂದ್ರ ಜಡೇಜಾ ಅವರೂ ಕೂಡ ಯೂತ್ ಐಕಾನ್ ಆಗಿರುವುದರಿಂದ ಯುವಕರನ್ನು ಸೆಳೆಯಲು ರಿವಾಬಾ ಜಡೇಜಾ ಅವರ ಸೇರ್ಪಡೆ ಬಿಜೆಪಿಗೆ ವರದಾನವಾಗಲಿದೆ.

Exit mobile version