Site icon PowerTV

ಶತ್ರುರಾಷ್ಟ್ರದ ವಿರುದ್ಧ ಭಾರತದ ಬ್ರಹ್ಮಾಸ್ತ್ರ..!

ನವದೆಹಲಿ: ಪಾಪಿ ಪಾಕ್​ಗೆ ಎದುರಾಗಿ ಭಾರತ ಈಗ ಜಿನೇವಾ ಒಪ್ಪಂದದ ಅಸ್ತ್ರ ಪ್ರಯೋಗಿಸಲು ನಿರ್ಧರಿಸಿದೆ. ಏಳು ದಿನಗಳೊಳಗೆ ಪೈಲಟ್ ಅಭಿನಂದನ್ ಅವರನ್ನು ಭಾರತಕ್ಕೆ ವಾಪಸ್‌ ಕಳುಹಿಸಬೇಕು. ಬಿಡುಗಡೆಗೊಳಿಸದಿದ್ದಲ್ಲಿ ಅದನ್ನು ಯುದ್ಧವೆಂದು ಪರಿಗಣಿಸಲಾಗುತ್ತದೆ ಅಂತ ಭಾರತ ಪಾಕಿಸ್ತಾನಕ್ಕೆ ಖಡಕ್​ ಎಚ್ಚರಿಕೆ ನೀಡಿದೆ.

ಜಿನೇವಾ ಒಪ್ಪಂದದ ಪ್ರಕಾರ ಸೆರೆ ಸಿಕ್ಕ ಯೋಧನಿಗೆ ಚಿತ್ರಹಿಂಸೆ, ಹತ್ಯೆ ಮಾಡುವುದು ನಿಷಿದ್ಧವಾಗಿದೆ. ವಿಮಾನ ಪತನವಾದಾಗಲೂ ನಿಯಮ ಪಾಲನೆ ಮಾಡಬೇಕು. ಸೆರೆಸಿಕ್ಕ ಕೈದಿಯ ಹೆಸರು, ಹುದ್ದೆ, ಸೀರಿಯಲ್ ನಂಬರ್‌ಗಳ ಹಂಚಿಕೆ ಮಾಡಬೇಕು. ಎದುರಾಳಿ ರಾಷ್ಟ್ರದ ಜೊತೆಗೆ ಮಾಹಿತಿ ಹಂಚಿಕೊಳ್ಳಲೇಬೇಕು ಅಂತ ಹೆಳಲಾಗಿದೆ. ಪಾಕಿಸ್ತಾನದಲ್ಲಿ ಒತ್ತೆಯಾಳಾಗಿರುವ ಭಾರತದ ಪೈಲೆಟ್‌ ಅಭಿನಂದನ್‌ಗೆ ಹಿಂಸೆ ನೀಡುವಂತಿಲ್ಲ. ಏಳು ದಿನಗಳೊಳಗೆ ಅಭಿನಂದನ್ ಅವರನ್ನು ಭಾರತಕ್ಕೆ ಕಳುಹಿಸಬೇಕೆಂದು ಪಾಕ್​ಗೆ ವಾರ್ನ್​ ಮಾಡಲಾಗಿದೆ.

ಗಡಿ ದಾಟಿ ಬಂದ ಪಾಕಿಸ್ತಾನದ ಎಫ್‌-16 ವಿಮಾನವನ್ನು ಭಾರತದ ಸೇನಾ ಪಡೆಗಳು ನಿನ್ನೆ ಹೊಡೆದುರುಳಿಸಿತ್ತು. ಭಾರತದ ವಾಯುಪಡೆಯ ಮಿಗ್‌ 21 ಬೈಸನ್‌ ವಿಮಾನ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಪತನಗೊಂಡಿತ್ತು. ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಪಾಕಿಸ್ತಾನ ಸೇನೆ ತನ್ನ ವಶದಲ್ಲಿ ಇಟ್ಟುಕೊಂಡಿದೆ.

 ಜಿನಿವಾ ಒಪ್ಪಂದ:

Exit mobile version