Site icon PowerTV

ಮೋದಿಯವ್ರೇ ನಿದ್ರೆ ಮಾಡ್ತಿದ್ರಾ..? ಪ್ರಧಾನಿ ವಿರುದ್ಧ ನಟಿ ರಮ್ಯಾ ಟ್ವೀಟ್ ದಾಳಿ..!

ಬೆಂಗಳೂರು: ಭಾರತೀಯ ವಾಯುಪಡೆ ವಿಂಗ್ ಕಮಾಂಡರ್​ ಪೈಲಟ್​ ಅಭಿನಂದನ್​ ಅವರನ್ನು ಪಾಕಿಸ್ತಾನ ಒತ್ತೆಯಾಳಾಗಿರಿಸಿರುವುದಕ್ಕೆ ಸಂಬಂಧಿಸಿ ನಟಿ ರಮ್ಯಾ ಅವರು ಪ್ರಧಾನಿ ಮೋದಿಗೆದುರಾಗಿ ಟ್ವೀಟ್ ಮಾಡಿದ್ದಾರೆ. ಗಡಿಯಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿರುವಾಗ ಪ್ರಧಾನಿ ಆ್ಯಪ್ ಲಾಂಚ್​ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಪ್ರಧಾನಿಯವರನ್ನು ರಮ್ಯಾ ಅವರು ಟೀಕಿಸಿದ್ದಾರೆ. ಪಾಕಿಸ್ತಾನ ದಾಳಿಗೆ ಪ್ರತ್ಯುತ್ತರ ನೀಡಬಹುದು ಎಂಬ ವಿಚಾರ ನಿಮಗೆ ತಿಳಿದಿರಲಿಲ್ಲವೇ..? ಅದನ್ನು ತಿಳಿದೂ ನೀವು ನಿದ್ರೆ ಮಾಡುತ್ತಿದ್ದಿರಾ..? ನಮ್ಮನ್ನು ಉದ್ದೇಶಿಸಿ ಮಾತನಾಡುವುದನ್ನು ಬಿಟ್ಟು ಆ್ಯಪ್ ಲಾಂಚ್ ಮಾಡೋಕೆ ಹೋಗಿದ್ದೀರಿ. ಜಮ್ಮುಕಾಶ್ಮೀರದಲ್ಲಿ ಕಾಣೆಯಾಗಿರೋ ಪೈಲಟ್​ ಬಗ್ಗೆ ಒಂದೇ ಒಂದು ಟ್ವೀಟ್​ನ್ನೂ ಮಾಡಿಲ್ಲ ಅಂತ ರಮ್ಯಾ ಕಿಡಿಕಾರಿದ್ದಾರೆ.

Exit mobile version