Site icon PowerTV

ಒಂದೇ ವಿಮಾನದಲ್ಲಿ ಯಡಿಯೂರಪ್ಪ- ಸಿದ್ದರಾಮಯ್ಯ..!

ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್​ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಒಂದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅಷ್ಟೇ ಅಲ್ಲದೆ ಪರಸ್ಪರ ಮಾತುಕತೆಯನ್ನೂ ನಡೆಸಿದ್ದಾರೆ.
ಬೆಂಗಳೂರಿನಿಂದ ಹುಬ್ಬಳ್ಳಿ ಒಂದೇ ವಿಮಾನದಲ್ಲಿ ಹೋದ ಯಡಿಯೂರಪ್ಪ ಮತ್ತು ಸಿದ್ದರಮಾಯ್ಯ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತುಕತೆ ನಡೆಸಿದ್ದಾರೆ. ಬಳಿಕ ಸಿದ್ದರಾಮಯ್ಯ ಬೆಳಗಾವಿ ಕಡೆಗೆ, ಯಡಿಯೂರಪ್ಪ ಹಾವೇರಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಆಪರೇಷನ್ ಆಡಿಯೋ ವಿಚಾರದಲ್ಲಿ ಪರಸ್ಪರ ವಾಗ್ವಾದಕ್ಕಿಳಿದಿದ್ದ ಇಬ್ಬರು ನಾಯಕರ ಇಂದಿನ ಭೇಟಿ ತೀವ್ರ ಕುತೂಹಲವನ್ನು ಕೆರಳಿಸಿದೆ.
ಆಡಿಯೋ ಪ್ರಕರಣದ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ,’ ಪ್ರಕರಣದ ತನಿಖೆಯನ್ನು ಎಸ್​ಐಟಿಗೆ ವಹಿಸುವುದು ಸಿಎಂಎಗೆ ಬಿಟ್ಟಿದ್ದು. ಎಸ್​ಐಟಿ ನೇಮಕ ಮಾಡ್ಬೇಕಿರೋದು ಸಿಎಂ, ನಾನಲ್ಲ’ ಎಂದರು,

Exit mobile version