Site icon PowerTV

3-4 ದಿನಗಳಲ್ಲಿ ಮೈತ್ರಿ ಸೀಟು ಹಂಚಿಕೆ ಫೈನಲ್ : ದಿನೇಶ್ ಗುಂಡೂರಾವ್

ಮಂಗಳೂರು : ಇನ್ನು 3-4 ದಿನಗಳಲ್ಲಿ ‘ ಮೈತ್ರಿ’ ಯ ‘ಲೋಕ’ಕಣದ ಸೀಟು ಹಂಚಿಕೆ ಫೈನಲ್ ಆಗಲಿದೆ.
ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರು, ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ -ಜೆಡಿಎಸ್​ ಸೀಟು ಹಂಚಿಯ ಪಟ್ಟಿಯನ್ನು ಇನ್ನು ಮೂರ್ನಾಲ್ಕು ದಿನಗಳಲ್ಲಿ ಅಂತಿಮಗೊಳಿಸುತ್ತೇವೆ. ನಾನು, ಹೆಚ್​.ಡಿ ರೇವಣ್ಣ, ಪರಮೇಶ್ವರ್ ಮತ್ತು ವಿಶ್ವನಾಥ್ ಸಭೆ ನಡೆಸಿ ಪಟ್ಟಿಯನ್ನು ಫೈನಲ್ ಮಾಡ್ತೀವಿ ಎಂದ್ರು.
ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ಮೈತ್ರಿಗೆ ಒಲವು ಹೊಂದಿದ್ದಾರೆ ಎನ್ನುವ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಈಶ್ವರಪ್ಪ ಅವರ ಹೇಳಿಕೆಗೆ ಬೆಲೆ ಕೊಡಲ್ಲ. ಕೇಂದ್ರದಲ್ಲಿ ಸರ್ಕಾರ ಹೋಗುತ್ತೆ ಅನ್ನೋ ಭಯದಲ್ಲಿ ಹತಾಶರಾಗಿ ಈ ರೀತಿ ಹುಚ್ಚು ಹಚ್ಚು ಹೇಳಿಕೆ ನೀಡುತ್ತಿದ್ದಾರೆ’ ಅಂತ ಹೇಳಿದ್ರು.
ನಟ ಪ್ರಕಾಶ್ ರೈ ಅವರು ಕಾಂಗ್ರೆಸ್​ ಸೇರುವ ಬಗ್ಗೆ ಮಾತನಾಡಿದ ಅವರು, ಪ್ರಕಾಶ್ ರೈ ಅವರಿಗೆ ತಮ್ಮ ಪಕ್ಷಕ್ಕೆ ಸೇರಿ ಅಂತ ಹೇಳಿದ್ದೇವೆ. ಅವರು ಸೇರದೇ ಇದ್ರೆ ನಾವೇನು ಮಾಡೋಕೆ ಆಗುತ್ತೆ? ಅಂತ ಪ್ರಶ್ನಿಸಿದ್ರು.
‘ದೇಶ ಆಳಬೇಕಾದದ್ದು ಭಾರತೀಯ ರಕ್ತವಾಗಬೇಕು, ಇಟಲಿ ರಕ್ತವಲ್ಲ’ ಎನ್ನುವ ಕೇಂದ್ರ ಸಚಿವ ಅನಂತ್​ಕುಮಾರ್ ಹೆಗಡೆ ಅವರ ಹೇಳಿಕೆಗೆ, ‘ಅನಂತ್​ಕುಮಾರ್ ಅವರ ಬೇಡದ ಇಂಥಾ ಹೇಳಿಕೆಗಳನ್ನು ನೀಡೋದು ಬಿಟ್ಟು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಗಮನಹರಿಸಲಿ’ ಅಂದ್ರು.

Exit mobile version