Site icon PowerTV

‘ನಾನು ಸಿಎಂ ಆಗೋದನ್ನು 3 ಬಾರಿ ತಪ್ಪಿಸಿದ್ದಾರೆ’ : ‘ಪರಮ’ ಸತ್ಯ..!

ದಾವಣಗೆರೆ : ‘ನಾನು ಮುಖ್ಯಮಂತ್ರಿ ಆಗುವುದನ್ನು 3 ಬಾರಿ ತಪ್ಪಿಸಿದ್ದಾರೆ’ ಅಂತ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಸ್ವಪಕ್ಷದ ವಿರುದ್ಧವೇ ಪರೋಕ್ಷವಾಗಿ ಗರಂ ಆಗಿದ್ದಾರೆ.
ದಾವಣಗೆರೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಹಮ್ಮಿಕೊಂಡಿದ್ದ ಅಭಿನಂದನಾ ಹಾಗೂ ಜನಜಾಗೃತಿ ಸಮಾವೇಶದಲ್ಲಿ ಅವರು ಆಕ್ರೋಶ ಹೊರಹಾಕಿದ್ರು. ‘ನಾನು ಸಿಎಂ ಆಗುವುದನ್ನು ಮೂರು ಬಾರಿ ತಪ್ಪಿಸಿದ್ದಾರೆ. ನಾನು ಬೇಡ ಬೇಡ ಅಂದ್ರೂ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ. ಪಕ್ಷದಲ್ಲಿ ನಮ್ಮನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ. ಆ ತುಳಿತಕ್ಕೆ ಎದುರಾಗಿ ನಿಲ್ಲಬೇಕೆಂದು ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಬಸವಲಿಂಗಪ್ಪ, ಕೆ. ಹೆಚ್ ರಂಗನಾಥ್​ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ರು. ಈ ಹಿಂದೆ ಮಲ್ಲಿಕಾರ್ಜುನ್​ ಖರ್ಗೆ ಅವರಿಗೂ ಸಿಎಂ ಸ್ಥಾನ ತಪ್ಪಿಸಲಾಗಿದೆ. ನಾನು ಸಿಎಂ ಆಗುವುದನ್ನು ಮೂರು ಬಾರಿ ತಪ್ಪಿಸಿದ್ದಾರೆ.ಸಮಾಜದ ನಾಯಕರಿಗೆ ಸಿಎಂ ಸ್ಥಾನದಿಂದ ವಂಚಿತರಾಗುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ರು.

Exit mobile version