Site icon PowerTV

ಸುಮಲತಾ ಸ್ಪರ್ಧೆಗೆ ಸಿಎಂ ಅಭಿನಂದನೆ..!

ಬೆಂಗಳೂರು : ಮಂಡ್ಯ’ಲೋಕ’ಕಣ ರಂಗೇರಿತ್ತಿದೆ. ಸಕ್ಕರೆನಾಡಲ್ಲಿ ಸ್ಟಾರ್ ವಾರ್ ಬಹುತೇಕ ಫಿಕ್ಸ್ ಆಗಿದೆ. ಸುಮಲತಾ ಅಂಬರೀಶ್​ ‘ನಾನು ಮಂಡ್ಯದಿಂದಲೇ ರಾಜಕೀಯ ಪ್ರವೇಶ ಮಾಡ್ತೀನಿ’ ಅಂತ ಹೇಳಿದ್ದಾರೆ. ”ನಿಮ್ಮ (ಮಂಡ್ಯ ಜನತೆ) ಋಣ ತೀರಿಸಲು ನಾನು ಬದ್ಧಳಾಗಿದ್ದೇನೆ. ಹೀಗಾಗಿ ಮಂಡ್ಯ ಜನಕ್ಕಾಗಿ ನಾನು ಸ್ಪರ್ಧೆ ಮಾಡುತ್ತೇನೆ. ಕೆಲವರು ಬೇರೆ ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಆದ್ರೆ, ನಾನು ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ಮಂಡ್ಯದಿಂದಲೇ ಸ್ಪರ್ಧೆ ಮಾಡ್ತೀನಿ” ಅಂದಿದ್ದಾರೆ.
ರಾಜಕೀಯಕ್ಕೆ ಎಂಟ್ರಿ ಕೊಡ್ತಿರೋ ಸುಮಲತಾ ಅಂಬರೀಶ್ ಅವರಿಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ. ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ”ಸುಮಲತಾ ಚುನಾವಣೆಗೆ ಸ್ಪರ್ಧಿಸುವುದಾದ್ರೆ ಸ್ಪರ್ಧಿಸಲಿ. ಯಾರು ಬೇಕಾದ್ರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದಿದ್ದಾರೆ.

Exit mobile version