Site icon PowerTV

ಮೋದಿ ಉಗ್ರರ ದಾಳಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ತಿದ್ದಾರೆ : ದಿನೇಶ್ ಗುಂಡೂರಾವ್

ಬೆಂಗಳೂರು : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ಜಿಕಲ್ ಸ್ಟೈಕ್ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಹೊರಟಿದೆ. UPA ಸರ್ಕಾರ 4 ಸರ್ಜಿಕಲ್ ಸ್ಟೈಕ್ ಮಾಡಿತ್ತು. ಆದ್ರೆ, ಮೋದಿ ತರ ಎಲ್ಲಿಯೂ ಹೇಳಿಕೊಂಡಿಲ್ಲ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ಉಗ್ರರ ದಾಳಿಯನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆ. ಮೋದಿಯವರ ಗಮನ ಲೋಕಸಭಾ ಚುನಾವಣೆ ಮೇಲಿದೆ. ಇಂತಹ ವಿಷಯಗಳಲ್ಲಿ ಹೀಗೆ ರಾಜಕೀಯ ಮಾಡುವುದು ಸರಿಯಲ್ಲ. ಅಮಿತ್ ಶಾ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮಾತುಗಳನ್ನಾಡ್ತಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ನಡೆಸಿ ಪ್ರಚಾರ ಪಡೆದುಕೊಂಡರಷ್ಟೇ. ಇವರು ಪಾಕಿಸ್ತಾನವನ್ನ ಏನಾದ್ರೂ ಮಟ್ಟ ಹಾಕಿದ್ದಾರಾ? UPA ಸರ್ಕಾರ ಇದ್ದಾಗ ನಾಲ್ಕು ಬಾರಿ ಸರ್ಜಿಕಲ್ ಸ್ಟೈಕ್ ನಡೆಸಿತ್ತು. ಆದ್ರೆ, ಮೋದಿಯವರಂತೆ ಎಲ್ಲಿಯೂ ಕೂಡ ಕೂಗಿ ಹೇಳಿಕೊಂಡು ಪ್ರಚಾರ ಮಾಡಿರಲಿಲ್ಲ. ಸೈನ್ಯದಲ್ಲಿನ ಚಟುವಟಿಕೆಗಳು ಗೌಪ್ಯವಾಗಿರಬೇಕು. ಆದ್ರೆ ಮೋದಿ ಸರ್ಕಾರ ಗೌಪ್ಯತೆಯನ್ನು ಹೊರ ಹಾಕ್ತಿದೆ ಇದರಿಂದ ದೇಶದ ಭದ್ರತೆ ವಿಷಯಕ್ಕೆ ಸಂಬಂಧಿಸಿದಂತೆ ದಕ್ಕೆಯಾಗುತ್ತದೆ ಎಂದರು.

Exit mobile version