Site icon PowerTV

ಆಡಿಯೋ ಕೇಸ್​ನಲ್ಲಿ ಕುಮಾರಸ್ವಾಮಿ ಅವರನ್ನು ಸಿಲುಕಿಸಲು ಸಿದ್ದರಾಮಯ್ಯ ಉದ್ದೇಶಿಸಿದ್ದಾರಂತೆ..!

ಹುಬ್ಬಳ್ಳಿ : ಆಡಿಯೋ ಪ್ರಕರಣದಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಸಿಲುಕಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ದೇಶಿಸಿದ್ದಾರಂತೆ..! ಹೀಗಂತ ಹೇಳಿರೋದು ಬಿಜೆಪಿ ಮುಖಂಡ ಕೆ.ಎಸ್​ ಈಶ್ವರಪ್ಪ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಆಡಿಯೋ ಪ್ರಕರಣವನ್ನು ಸಿದ್ದರಾಮಯ್ಯ ಬಹಳ ಒತ್ತಾಯ ಮಾಡಿ ಎಸ್​ಐಟಿ ತನಿಖೆಗೆ ಒಪ್ಪಿಸಿದ್ದಾರೆ. ಜೆಡಿಎಸ್​​ ಮೇಲೆ ಹಗೆ ಸಾಧಿಸಿ ಕುಮಾರಸ್ವಾಮಿ ಅವರನ್ನು ಸಿಲುಕಿಸಲು ಎಸ್​ಐಟಿಯನ್ನು ನೇಮಕ ಮಾಡಿದ್ದಾರೆ ಎಂದರು.
ಕುಮಾರಸ್ವಾಮಿಯವರು ಸ್ಪೀಕರ್ ತೀರ್ಮಾನಕ್ಕೆ ಬದ್ಧ ಎಂದಿದ್ದರು. ಆದ್ರೆ, ಎಸ್‌ಐಟಿ ತನಿಖೆ ಮಾಡೇ ಮಾಡ್ತೀವಿ ಎಂದು ಸಿದ್ದರಾಮಯ್ಯ ಹೇಳಿದ್ರು. ಸಿದ್ದರಾಮಯ್ಯ ಯಾಕೇ ಘೋಷಣೆ ಮಾಡಿದ್ರು? ಘೋಷಣೆ ಮಾಡಲು ಅವರ್ಯಾರು? ಪ್ರಕರಣದಲ್ಲಿ ಕುಮಾರಸ್ವಾಮಿಯವರನ್ನು ಸಿಲುಕಿಸಬೇಕು ಎನ್ನುವುದು ಸಿದ್ದರಾಮಯ್ಯ ಉದ್ದೇಶ ಅಂತ ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

Exit mobile version