Site icon PowerTV

ಪಕ್ಷದ ಬೆನ್ನಿಗೆ ಚೂರಿ ಹಾಕದಿದ್ರೆ ಸಾಕು : ದಿನೇಶ್ ಗುಂಡೂರಾವ್

ಕೋಲಾರ : ಅತೃಪ್ತರು ಪಕ್ಷ ತೊರೆದರೆ ನಷ್ಟವಿಲ್ಲ. ಪಕ್ಷದ ಬೆನ್ನಿಗೆ ಚೂರಿ ಹಾಕದಿದ್ರೆ ಸಾಕು ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತರು ಪಕ್ಷ ಬಿಟ್ಟು ಹೋದ್ರೆ ಯಾವುದೇ ನಷ್ಟವಿಲ್ಲ. ಬೆನ್ನಿಗೆ ಚೂರಿ ಹಾಕದಿದ್ದರೆ ಸಾಕು. ಜೆಡಿಎಸ್ ಜೊತೆಗೆ ಹೊಂದಾಣಿಕೆಯ ಬಗ್ಗೆಯೂ ಶೀಘ್ರವೇ ಅಂತಿ‌ಮ ಮಾಡ್ತೀವಿ. ಬಿಜೆಪಿಯವರ ಆಮಿಷಕ್ಕೆ ಒಳಗಾಗಿ ಪಕ್ಷ ಬಿಡುವ ಆಲೋಚನೆ ಮಾಡಿದ್ದ ಕೆಲವರಿಗೆ ಈಗ ಬುದ್ಧಿ ಬಂದಿದೆ. ಹಣದ ಆಮಿಷವು ನಮ್ಮಲ್ಲಿದ್ದವರನ್ನು ವಿಚಲಿತರನ್ನಾಗಿಸಿದ್ದು ನಿಜ. ದಾರಿ ತಪ್ಪಿದ ನಮ್ಮ ಕೆಲವರಿಗೆ ಜ್ಞಾನೋದಯವಾಗಿದೆ. ಇಷ್ಟಾಗಿಯೂ ಪಕ್ಷ ಬಿಡುವವರನ್ನು ಕೂಡಾಕಿಕೊಳ್ಳುವುದಿಲ್ಲ ಅಂತ ಎಚ್ಚರಿಸಿದರು.

Exit mobile version