Site icon PowerTV

ಇಂಥಾ ಪೊಳ್ಳು ಬೆದರಿಕೆಗೆಲ್ಲಾ ನನ್ನ ಮಗ ಹೆದರಲ್ಲ : ಪ್ರೀತಂಗೌಡ ತಾಯಿ

ಹಾಸನ : ‘ನನ್ನ ಮಗ ವೀರ… ಇಂಥಾ ಬೆದರಿಕೆಗೆಲ್ಲಾ ಹೆದರಲ್ಲ’ ಅಂತ ಹಾಸನ ಶಾಸಕ ಪ್ರೀತಂಗೌಡ ಅವರ ತಾಯಿ ನಾಗರತ್ನ ಹೇಳಿದ್ದಾರೆ.
ತಮ್ಮ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ನಡೆಸಿದ ಕಲ್ಲುತೂರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಹಾಸನ ಜೆಡಿಎಸ್​ ಭದ್ರಕೋಟೆಯಾಗಿತ್ತು. ಅಂಥಾ ಕೋಟೆಯನ್ನು ಬೇಧಿಸಿರುವ ನನ್ನ ಮಗ ಧೀರ, ವೀರ. ಅವನು ಇಂಥಾ ಪೊಳ್ಳು ಬೆದರಿಕೆಗೆಲ್ಲಾ ಹೆದರಲ್ಲ. ಮನೆಯಲ್ಲಿ ಯಾರೂ ಇಲ್ದೇ ಇರುವಾಗ ಹೀಗೆ ದಾಳಿ ಮಾಡಿರೋದು ತಪ್ಪು. ಮಾನಸಿಕವಾಗಿ ಕುಟುಂಬಕ್ಕೆ ಕಿರುಕುಳ ನೀಡಿರುವುದು ಸರಿಯಲ್ಲ. ನಾನು ಲೋ ಬಿಪಿಯಿಂದ ಡಾಕ್ಟರ್ ಬಳಿ‌ ಹೊರಟಿದ್ದೆ . ಆ ವೇಳೆ ಜೆಡಿಎಸ್​ ಶಾಸಕರು ದಾಳಿ ಮಾಡಿದ್ರಿಂದ​ ಶಾಕ್ ಆಗಿದೆ. ನನ್ನಮಗ ಏನೂ ತಪ್ಪು ಮಾಡಿಲ್ಲ, ತಪ್ಪು ದಾರಿಯಲ್ಲಿ ಹೋಗಲ್ಲ’ ಎಂದರು.

Exit mobile version