Site icon PowerTV

‘ಪ್ರಿಯಾಂಕಾಳನ್ನು ಸುರಕ್ಷಿತವಾಗಿ ನೋಡ್ಕೊಳ್ಳಿ’ : ರಾಬರ್ಟ್​ ವಾದ್ರಾ

ನವದೆಹಲಿ: ಪ್ರಿಯಾಂಕ ವಾದ್ರಾ ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದು,ಪತಿ ರಾಬರ್ಟ್​ ವಾದ್ರಾ ಪತ್ನಿಗೆ ಬೆಸ್ಟ್​ ವಿಶಸ್​ ತಿಳಿಸಿದ್ದಾರೆ.

“ಪ್ರಿಯಾಂಕಾ, ನಿನಗೆ ನನ್ನ ಹಾರೈಕೆಗಳು. ಉತ್ತರ ಪ್ರದೇಶದಲ್ಲಿ ಕೆಲಸ ಮಾಡಿಕೊಂಡು ದೇಶದ ಜನರ ಸೇವೆ ಮಾಡುವ ಹೊಸ ಪ್ರಯಾಣ ಆರಂಭವಾಗಿದೆ. ನನ್ನ ಬೆಸ್ಟ್​ ಫ್ರೆಂಡ್​, ಉತ್ತಮ ಪತ್ನಿ ಹಾಗೂ ನಮ್ಮ ಮಕ್ಕಳಿಗೆ ಒಳ್ಳೆಯ ತಾಯಿಯಾಗಿದ್ದಿ. ಈಗ ಪ್ರತೀಕಾರದ ಮತ್ತು ಅನೈತಿಕವಾದ ರಾಜಕೀಯ ವಾತಾವರಣವಿದೆ. ಆದರೆ ದೇಶದ ಜನರ ಸೇವೆ ಮಾಡುವುದು ಆಕೆಯ ಕರ್ತವ್ಯ ಅಂತ ನನಗೆ ತಿಳಿದಿದೆ. ನಾವೀಗ ಆಕೆಯನ್ನು ಭಾರತೀಯ ಜನರ ಕೈಗೊಪ್ಪಿಸುತ್ತಿದ್ದೇವೆ. ಆಕೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳಿ” ಅಂತ ರಾಬರ್ಟ್​ ವಾದ್ರಾ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ರಾಬರ್ಟ್​ ವಾದ್ರಾ ಭ್ರಷ್ಟಾಚಾರ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿದ್ದಾರೆ.

Exit mobile version