Site icon PowerTV

ಬಿಎಸ್​ವೈ ಧ್ವನಿ ಅಂತ ಪ್ರೂವ್ ಆಗ್ದೇ ಇದ್ರೆ ರಾಜಕೀಯ ನಿವೃತ್ತಿ : ಹೆಚ್​ಡಿಕೆ

ಮಂಗಳೂರು : ತಾನು ಬಿಡುಗಡೆ ಮಾಡಿರುವ ಆಡಿಯೋದಲ್ಲಿನ ಧ್ವನಿ ಯಡಿಯೂರಪ್ಪ ಅವರದ್ದೇ ಎಂದು ನಾನೆಲ್ಲೂ ಹೇಳಿಲ್ಲ. ಆದರೆ, ಅದು ಯಡಿಯೂರಪ್ಪ ಅವರ ಧ್ವನಿ ಅಲ್ಲ ಅಂತಾದ್ರೆ ನಾನು ರಾಜಕೀಯ ನಿವೃತ್ತಿ ಪಡಿತೀನಿ ಅಂತ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಆಪರೇಷನ್​ ಕಮಲದ ಬಗ್ಗೆ ರಿಲೀಸ್​ ಆಗಿರುವ ಆಡಿಯೋದಲ್ಲಿನ ವಾಯ್ಸ್ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಅವರದ್ದು ಅಲ್ಲ ಎಂಬ ಸ್ಪೀಕರ್ ಅವರ ಹೇಳಿಕೆಗೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ”ಆಡಿಯೋದಲ್ಲಿನ ಧ್ವನಿ ಯಡಿಯೂರಪ್ಪ ಅವರದ್ದು ಅಂತ ನಾನೆಲ್ಲೂ ಹೇಳಿಲ್ಲ” ಅಂತ ಹೇಳಿದ್ರು.
‘ಈ ಬಗ್ಗೆ ತನಿಖೆಯಾಗಬೇಕು, ಆಡಿಯೋದಲ್ಲಿ ಪ್ರಧಾನಿ, ಸ್ಪೀಕರ್​, ಅಮಿತ್​ ಶಾ ಅವರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರೋ ಮಾತು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಆಡಿಯೋ ಬಗ್ಗೆ ಪ್ರಧಾನಮಂತ್ರಿಗಳು ತನಿಖೆಗೆ ತೀರ್ಮಾನಿಸಿ ಸಹಕಾರಕೊಟ್ಟರೆ ಅವರ ನೇತೃತ್ವದಲ್ಲೇ ತನಿಖೆ ನಡೆಯಲಿ. ಯಡಿಯೂರಪ್ಪ ಅವರು ಇದು ಮಿಮಿಕ್ರಿ ಅಂತ ಕರೆದಿದ್ದಾರೆ. ಸತ್ಯಾಸತ್ಯತೆ ತಿಳಿಬೇಕಾದ್ರೆ ತನಿಖೆ ಆಗಬೇಕು. ಎಸಿಬಿ ತನಿಖೆ ಬಗ್ಗೆಯೂ ನೋಡೋಣ’ಅಂದ್ರು.
ಬಳಿಕ ಧರ್ಮಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಆ ಆಡಿಯೋದಲ್ಲಿನ ವಾಯ್ಸ್ ಯಡಿಯೂರಪ್ಪ ಅವರದ್ದು ಅಂತ ಹೇಳಿಲ್ಲ. ಕನಿಷ್ಟ ಜ್ಞಾನ ಇಲ್ಲದವನೂ ಈ ಆಡಿಯೋದಲ್ಲಿರೋದು ಯಡಿಯೂರಪ್ಪ ಅವರ ವಾಯ್ಸೇ ಅಂತ ಕಂಡು ಹಿಡಿಯುತ್ತಾನೆ. ಅದು ಯಡಿಯೂರಪ್ಪ ಅವರ ವಾಯ್ಸ್ ಅಂತ ಸಾಬೀತಾಗದೇ ಇದ್ರೆ ರಾಜಕೀಯ ನಿವೃತ್ತಿ ಆಗುತ್ತೇನೆ’ ಎಂದರು.

Exit mobile version