Site icon PowerTV

ಎಎಪಿ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿದ್ದ ಶಾಸಕಿ ಪಕ್ಷಕ್ಕೆ ಗುಡ್​​ಬೈ ಹೇಳ್ತಾರಾ?

ನವದೆಹಲಿ : ಆಮ್​ ಆದ್ಮಿ ಪಕ್ಷದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಶಾಸಕಿ ಅಲ್ಕಾ ಲಂಬಾ ಪಕ್ಷವನ್ನು ತೊರೆಯುವ ಮುನ್ಸೂಚನೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ದೆಹಲಿಯ ಎಎಪಿಯಲ್ಲಿನ ಬಿರುಕು ದೊಡ್ಡದಾಗುತ್ತಿದೆ. ಇದೀಗ ಪಕ್ಷದ ಅಧ್ಯಕ್ಷ ಸ್ಥಾನದತ್ತ ಚಿತ್ತ ನೆಟ್ಟಿದ್ದ ಅಲ್ಕಾ ಲಂಬಾ ಅವರು ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
”ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಟ್ವೀಟರ್​ನಲ್ಲಿನ ನನ್ನ ಅನ್​ಫಾಲೋ ಮಾಡಿದ್ದಾರೆ! ಪಕ್ಷಕ್ಕೆ ನನ್ನ ಸೇವೆಯ ಅವಶ್ಯಕತೆ ಇಲ್ಲ ಅಂತ ಹೇಳಿದ್ದಾರೆ! ಅಧಿಕೃತ ವಾಟ್ಸಪ್​ ಗ್ರೂಪ್​​ನಿಂದ ನನ್ನನ್ನು ತೆಗೆದು ಹಾಕಿದ್ದಾರೆ! ಯಾವ್ದೇ ಕಾರ್ಯಕ್ರಮ, ಸಭೆಗಳಿಗೆ ನನ್ನ ಆಹ್ವಾನಿಸ್ತಿಲ್ಲ! ಎಲ್ಲಾ ಶಾಸಕರಿಗೆ ಸಿಗೋ ಗೌರವ ನಂಗೂ ಸಿಗ್ಬೇಕು! ಇಲ್ದೇ ಇದ್ರೆ ನಾನು ಪಕ್ಷದಲ್ಲಿ ಮುಂದುವರೆಯೋಕೆ ಕಷ್ಟವಾಗುತ್ತೆ” ಎಂದು ಹೇಳುವ ಮೂಲಕ ಅಲ್ಕಾ ಲಂಬಾ ಪಕ್ಷಕ್ಕೆ ಗುಡ್​ ಬೈ ಹೇಳೋ ಸೂಚನೆ ಕೊಟ್ಟಿದ್ದಾರೆ.

Exit mobile version