Site icon PowerTV

ಕಾಂಗ್ರೆಸ್​ ಸಂಪರ್ಕದಲ್ಲಿದ್ದಾರಂತೆ ಬಿಜೆಪಿ ಶಾಸಕರು!

ಮಂಗಳೂರು : ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಅಂತ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಬಜೆಟ್ ಮಂಡನೆ ವೇಳೆ ಶಾಸಕರ ಗೈರು ಭೀತಿ ವಿಚಾರಕ್ಕೆ ಸಂಬಂಧಪಟ್ಟಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಜೊತೆ ಬಿಜೆಪಿಯ ಕೆಲವು ಶಾಸಕರು ಸಂಪರ್ಕದಲ್ಲಿದ್ದಾರೆ. ಅವರು ಯಾರು ಅಂತ ನಾನು ಹೇಳಲಾರೆ. ನಮಗೆ ಯಾವ್ದೇ ರೀತಿಯ ಭೀತಿ ಇಲ್ಲ’ ಎಂದರು.
ಸರಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಕರ್ನಾಟಕಕ್ಕೆ ಅಗೌರವ ತರುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಅದಕ್ಕೆ ನಾವು ತಲೆಕೆಡಿಸಿಕೊಂಡಿಲ್ಲ. ನಮ್ಮ ಜೊತೆಯೇ ಬಿಜೆಪಿ ಶಾಸಕರು ಇದ್ದು, ಅದು ದೊಡ್ಡಮಟ್ಟದಲ್ಲಿ ನಡೆಯುತ್ತಿರುವ ವಿಷಯ ಎಂದು ತಿಳಿಸಿದರು.

Exit mobile version