Site icon PowerTV

ಸುಮಲತಾ ರಾಜಕೀಯಕ್ಕೆ ಬಂದ್ರೆ ಸ್ವಾಗತ : ಗುಂಡೂರಾವ್

ಮಂಡ್ಯ : ಸುಮಲತಾ ಅಂಬರೀಶ್ ರಾಜಕೀಯ ಪ್ರವೇಶಿಸಿದರೆ ನಾವು ಸ್ವಾಗತಿಸ್ತೀವಿ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ ಹೇಳಿದ್ದಾರೆ. 
ಮದ್ದೂರಿನಲ್ಲಿ ಮಾತನಾಡಿದ ಅವರು, ‘ಸುಮಲತಾ ಅಂಬರೀಶ್ ರಾಜಕೀಯಕ್ಕೆ ಬಂದ್ರೆ ಸ್ವಾಗತ. ಅವರು ಸ್ಪರ್ಧಿಸುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಮೈತ್ರಿ ಪಕ್ಷದಲ್ಲಿ ಸ್ಥಾನ ಹೊಂದಾಣಿಕೆ ಆಗಿಲ್ಲ. ಯಾರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಬಗ್ಗೆ ಚರ್ಚೆಯಾಗಿಲ್ಲ. ಮಾತುಕತೆ ನಂತರ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋ ತೀರ್ಮಾನ ಕೈಗೊಳ್ಳಲಾಗುತ್ತದೆ’ ಅಂತ ತಿಳಿಸಿದ್ರು. 

Exit mobile version