Site icon PowerTV

ಬಿಜೆಪಿಯಿಂದ ಸ್ಪರ್ಧಿಸಲು ಸುಮಲತಾ ಅವರಿಗೆ ಹುಚ್ಚೇ? : ಡಾ.ಸಿದ್ದರಾಮಯ್ಯ

ಮಂಡ್ಯ : ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಲು ಸುಮಲತಾ ಅವರಿಗೆ ಹುಚ್ಚೇ ಅಂತ ಬಿಜೆಪಿ ಮುಖಂಡ ಡಾ. ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸುಮಲತಾ ಅಂಬರೀಶ್ ಬಿಜೆಪಿಯಿಂದ ಕಣಕ್ಕಿಳಿಯುತ್ತಾರೆ ಎಂದು ಕೇಳಿಬರುತ್ತಿರುವ ಮಾತುಗಳಿಗೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
”ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಹುಚ್ಚೇ? ಅವರ ಪತಿ ಅಂಬರೀಶ್ ಕಾಂಗ್ರೆಸ್​ನಲ್ಲಿದ್ದವರು. ಅವರು ಯಾಕೆ ನಮ್ಮ ಪಕ್ಷಕ್ಕೆ ಬರ್ತಾರೆ? ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಒಂದು ಭಾಗ. ಆಡಳಿತ ಪಕ್ಷ ಬಿಟ್ಟು, ವಿರೋಧ ಪಕ್ಷದಲ್ಲಿ ಸ್ಪರ್ಧಿಸಲು ಅವರಿಗೇನು ಹುಚ್ಚೇ” ಎಂದು ಹೇಳುವ ಮೂಲಕ ಸುಮಲತಾ ಸ್ಪರ್ಧೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

Exit mobile version