Site icon PowerTV

ಇದ್ಯಾರಿಗೆ ಬೇಕ್ರೀ? ನಾನು ರಾಜೀನಾಮೆ ಕೊಟ್ಟು ಹೋಗ್ತೇನೆ : ಸಿಎಂ ಮತ್ತೆ ರಾಜೀನಾಮೆ ಪ್ರಸ್ತಾಪ!

ಬೆಂಗಳೂರು : ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಮತ್ತೆ ರಾಜೀನಾಮೆ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ!
ಸಂಪುಟ ಸಭೆಯಲ್ಲಿ ಸಿಎಂ ಕಾಂಗ್ರೆಸ್​​ ಬಗ್ಗೆ ಮತ್ತೊಮ್ಮೆ ಅಸಮಧಾನ ವ್ಯಕ್ತಪಡಿಸಿದ್ದು, ರಾಜೀನಾಮೆ ಬೇಕಾದ್ರೆ ನೀಡ್ತೀನಿ ಅಂದಿದ್ದಾರೆ.
ಸಭೆಯಲ್ಲಿ ಕೆಂಡಾಮಂಡಲವಾದ ಸಿಎಂ ಕುಮಾರಸ್ವಾಮಿ, ”ಕಾಂಗ್ರೆಸ್​ನವರು ಬಾಯಿಗೆ ಬಂದಹಾಗೆ ಮಾತಾಡಿಕೊಂಡು ಬರ್ತಿದ್ದಾರೆ. ಹೀಗೆ ಆದ್ರೆ ನಾವು ಆಡಳಿತ ನಡೆಸೋದಾದ್ರೂ ಹೇಗೆ? ನಮಗೆ ಆಡಳಿತ ನಡೆಸಲು ಬಿಡಿ. ಇಲ್ಲಾ ನಾನು ರಾಜೀನಾಮೆ ಕೊಟ್ಟು ಹೋಗ್ತೇನೆ. ಇದ್ಯಾರಿಗೆ ಬೇಕ್ರೀ? ನನ್ನನ್ನು ಸಿಎಂ ಮಾಡಿ ಅಂತ ನಾನು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ನನಗಿದು ಬೇಕಾಗೂ ಇಲ್ಲ. ಇದೇನಿದು ರಗಳೆ. ದಿನ ಬೆಳಗೆದ್ರೆ ರಾಮಾಯಣ. ನನಗೂ ಸಾಕಾಗಿ ಹೋಗಿದೆ. ಸಮಸ್ಯೆಗಳ ಬಗ್ಗೆ ಏನಾದ್ರೂ ಇದ್ರೆ ನೇರವಾಗಿ ನನ್ನನ್ನು ಭೇಟಿಯಾಗಲಿ. ಅದು ಬಿಟ್ಟು ಹಾದೀಲಿ ಬೀದಿಲಿ ಮಾತಾಡೋದಲ್ಲ” ಎಂದು ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ.

Exit mobile version