Site icon PowerTV

ಲೋಕಸಭಾ ಚುನಾವಣಾ ಕಣಕ್ಕೆ ರಿಯಲ್ ಸ್ಟಾರ್ ಉಪೇಂದ್ರ

ರಿಯಲ್​ ಸ್ಟಾರ್​ ಉಪೇಂದ್ರ ಅವರು ತಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಜೊತೆಗೆ ತಮ್ಮ ‘ಉತ್ತಮ ಪ್ರಜಾಕೀಯ ಪಕ್ಷ- UPP’ಯಿಂದ ರಾಜ್ಯದ 28 ಲೊಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಅಂತ ತಿಳಿಸಿದ್ದಾರೆ.
ಹಿಂದೆ ಪ್ರಜಾಕೀಯ ಅನ್ನೋ ಕಾನ್ಸೆಪ್ಟ್ ಇಟ್ಕೊಂಡು ಬಂದ್ವಿ. ಯಾವ್ದೋ ಒಂದು ಪಕ್ಷದ ಜೊತೆ ಸೇರಿದ್ವಿ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸ್ಬೇಕು ಅಂತ ಅನ್ಕೊಂಡಿದ್ವಿ. ಆದ್ರೆ, ಅದು ಸಾಧ್ಯವಾಗಿಲ್ಲ. ಆ ಪಕ್ಷ ಬಿಟ್ಟಿದ್ದೀವಿ. ನಮ್ಮದೇ ಆದ ‘ಉತ್ತಮ ಪ್ರಜಾಕೀಯ ಪಕ್ಷ- UPP’ಅನ್ನು ಸ್ಥಾಪಿಸಿದ್ದೇವೆ. 28 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸ್ತೀವಿ. ನಮ್ಮ ಪಕ್ಷದ ಚಿಹ್ನೆ ಆಟೋ.. ಅಂತ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಮ, ನಮಗೇನು ಗೊತ್ತಿಲ್ಲ-ನಾವೇನು ಮಾಡಲ್ಲ. ನೀವ್ ಹೇಳೋದನ್ನು ಬಿಟ್ಟು. ಅಂದ್ರೆ, ಜನ ಹೇಳಿದ್ದನ್ನು ಮಾಡ್ತೀವಿ. ನಾವು ಅದು-ಇದು ಮಾಡ್ತೀವಿ ಅಂತ ಹೇಳಲ್ಲ. ಜನರ ಬಳಿ ಹೋಗಿ ಅವರ ಸಮಸ್ಯೆ ತಿಳಿದುಕೊಳ್ಳುತ್ತೇವೆ ಎಂದರು.
ನಾವು ಎಂದೂ ಯಾವ ಪಕ್ಷದ ಜೊತೆಯೂ ಸೇರಲ್ಲ. ನಮ್ಮ ಪಕ್ಷಕ್ಕೆ ಬಹುಮತ ಬಂದ್ರೇನೆ ಸರ್ಕಾರ ರಚಿಸೋದು ಅಂದರು. ಇನ್ನು ಪ್ರಕಾಶ್ ರೈ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಜನರಿಗಾಗಿ ಏನ್ ಮಾಡ್ತೀವಿ ಅಂತ ಹೇಳಿ ಪಕ್ಷಕ್ಕೆ ಬಂದರೆ ಖಂಡಿತಾ ಸ್ವಾಗತ ಅಂತ ಹೇಳಿದ್ರು.

Exit mobile version