Site icon PowerTV

ಗಣರಾಜ್ಯೋತ್ಸವದ ವೇದಿಕೆಯಲ್ಲಿ ಪ್ರೀತಮ್​ ಗೌಡ-ರೇವಣ್ಣ ವಾಕ್ಸಮರ!

ಹಾಸನ : ಗಣರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿಯೇ ಸಚಿವ ಎಚ್​.ಡಿ ರೇವಣ್ಣ ಮತ್ತು ಶಾಸಕ ಪ್ರೀತಮ್​ ಗೌಡ ನಡುವೆ ವಾಕ್ಸಮರ ನಡೆದಿದೆ!
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದ ವೇಳೆ, ಪ್ರೀತಮ್ ಗೌಡ ಮತ್ತು ರೇವಣ್ಣ ನಡುವೆ ಹಾಸನದ ಬಿಎಂ ರಸ್ತೆ ಅಗಲೀಕರಣ ವಿಚಾರದಲ್ಲಿ ವಾಗ್ವಾದ ನಡೆದಿದೆ. ಕಟ್ಟಡ ತೆರವು ಬಗ್ಗೆ ನಗರಸಭೆ ಆಯುಕ್ತರು ಮಾಹಿತಿ ನೀಡಿಲ್ಲ ಅಂತ ಕಿಡಿ ಕಾರಿದ ಪ್ರೀತಮ್ ಗೌಡ, ತಾನು ಆಯುಕ್ತರ ವಿರುದ್ಧ ಹಕ್ಕುಚ್ಯುತಿ ಮಂಡಿಸ್ತೀನಿ ಅಂತ ಹೇಳಿದ್ರು. ಅದಕ್ಕೆ ತಿರುಗೇಟು ನೀಡಿದ ರೇವಣ್ಣ, ಆ ಬಗ್ಗೆ ನನಗೇ ಹೇಳಿಲ್ಲ. ಹಕ್ಕುಚ್ಯುತಿ ಅಂದ್ರೆ ಏನು ಅಂತಾ ಗೊತ್ತಾ? ಮೊದಲು ಓದ್ಕೊಳ್ಳಿ. ಆಯುಕ್ತರ ಪರ ಮಾತನಾಡೋದು ನನಗೆ ಗೊತ್ತಿದೆ ಅಂದ್ರು.

Exit mobile version