Site icon PowerTV

ಬಜೆಟ್ ಪೂರ್ವಭಾವಿ ಸಭೆ: ರೈತರ ಜೊತೆ ಸಿಎಂ ಚರ್ಚೆ

ಬೆಂಗಳೂರು: ರೈತ ಮುಖಂಡರ ಜೊತೆ ಬಜೆಟ್​​ ಪೂರ್ವಭಾವಿ ಸಭೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿದೆ. ಸಿಎಂ ಎಚ್​ ಡಿ ಕುಮಾರಸ್ವಾಮಿ ಸಭೆಯ ನೇತೃತ್ವ ವಹಿಸಿದ್ದಾರೆ. ಸಭೆಯಲ್ಲಿ ‌ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಸರ್ಕಾರದ ಸಿಎಸ್​, ಕೃಷಿ ಅಧಿಕಾರಿಗಳು, ರೈತರು ಭಾಗಿಯಾಗಿದ್ದಾರೆ. ಸಭೆಗೆ ಬಿಡದ ಅಧಿಕಾರಿಗಳ ವಿರುದ್ಧ ರೈತರು ಗರಂ ಆಗಿದ್ದಾರೆ.

ಸಿಎಂ ಇಂದು ರೈತರು, ರೈತ ಮುಖಂಡರು, ರೈತ ಸಂಘಟನೆಗಳ ಜೊತೆ ಸಿಎಂ ಚರ್ಚೆ ನಡೆಸಲಿದ್ದಾರೆ. ಸಾಕಷ್ಟು ರೈತರು ಸಭೆಯಲ್ಲಿ ಭಾಗವಹಿಸಿ ಅಹವಾಲು ಕೊಡ್ತಾ ಇದ್ದಾರೆ. ಹಾಗೇ ಕೃಷಿ ಕುರಿತು ಬಜೆಟ್​ನಲ್ಲಿ ಮೀಸಲಿಡುವ ಮೊತ್ತ, ಕೃಷಿ ಸಾಲ ಮನ್ನಾ ಕುರಿತು ಚರ್ಚೆ ನಡೆಸಲಾಗ್ತಿದೆ. 2019ನೇ ಬಜೆಟ್​ ಮಂಡನೆಗೂ ಸಿಎಂ ತಯಾರಿ ನಡೆಸ್ತಾ ಇದ್ದಾರೆ. ಫೆಬ್ರವರಿ 8ರಂದು ಬಜೆಟ್ ಮಂಡನೆ ನಡೆಯಲಿದೆ. ಫೆಬ್ರವರಿ 6ರಂದು ಜಂಟಿ ಅಧಿವೇಶನ ನಡೆಯಲಿದ್ದು, ಸಿಎಂ ಅವರು ರಾಜ್ಯಪಾಲ ವಜುಬಾಯಿ ವಾಲಾ ಅವರನ್ನು ಈಗಾಗಲೇ ಆಹ್ವಾನಿಸಿದ್ದಾರೆ. 

Exit mobile version