Site icon PowerTV

ರಣಜಿ ಸೆಮಿ ಫೈನಲ್​: ಕರ್ನಾಟಕಕ್ಕೆ 9 ವಿಕೆಟ್ ನಷ್ಟಕ್ಕೆ 264 ರನ್

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆತಿಥೇಯ ಕರ್ನಾಟಕ ಹಾಗೂ ಸೌರಾಷ್ಟ್ರ ವಿರುದ್ಧದ ರಣಜಿ ಸೆಮಿಪೈನಲ್ ಪಂದ್ಯದಲ್ಲಿ ಮನೀಷ್ ಪಾಂಡೆ ಪಡೆ ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡ ಮನೀಷ್ ಪಾಂಡೆಯ ನಿರ್ಧಾರ ಆರಂಭದಲ್ಲೇ ಸಫಲವಾಗಲಿಲ್ಲ. ಆತಿಥೇಯ ತಂಡದ ಆರಂಭಿಕ ಆಟಗಾರರಾದ ರವಿಕುಮಾರ್ ಸಮರ್ಥ್(0) ಹಾಗೂ ಮಾಯಂಕ್ ಅಗರ್ವಾಲ್(2) ನಿರಾಶೆ ಮೂಡಿಸಿದ್ರು. ನಂತರ ಎಚ್ಚರಿಕೆಯ ಆಟವಾಡಿದ ನಾಯಕ ಮನೀಷ್ ಪಾಂಡೆ(62), ಶ್ರೇಯಸ್ ಗೋಪಾಲ್(87) ಹಾಗೂ ವಿಕೆಟ್ ಕೀಪರ್  ಶ್ರೀನಿವಾಸ್ ಶರತ್(74*)ರ ಅರ್ಧಶತಕದ ಕಾಣಿಕೆ ನೀಡಿದ್ರು. ಸೌರಾಷ್ಟ್ರದ ಪರ ಕರಾರುವಕ್ ದಾಳಿ ನಡೆಸಿದ ಸೌರಷ್ಟ್ರ ನಾಯಕ ಜಯ್‍ದೇವ್ ಉನದ್ಕಾತ್ 4ವಿಕೆಟ್ ಕಬಳಿಸಿ ಕರ್ನಾಟಕದ ಪತನಕ್ಕೆ ಕಾರಣರಾದ್ರು. ಸೌರಾಷ್ಟ್ರ ಪರ ಕಮಲೇಶ್ ಮಕ್ವಾನ 3 ವಿಕೆಟ್ ಕಬಳಿಸಿದ್ರೆ, ಧರ್ಮೇಂದ್ರಸಿನ್ ಜಡೇಜಾ ಹಾಗೂ ಚೇತನ್ ಸಕರೀಯಾ ತಲಾ 1 ವಿಕೆಟ್ ಪಡೆದ್ರು.

 

Exit mobile version