Site icon PowerTV

ಇವರಿಗೆ ಚಪ್ಪಲಿಯಲ್ಲಿ ಹೊಡೆದ್ರೂ ಬುದ್ಧಿ ಬರಲ್ಲ : ಕೆ.ಸಿ ಕೊಂಡಯ್ಯ

ಬಳ್ಳಾರಿ : ರಾಮನಗರ ಬಳಿಯ ಈಗಲ್​ಟನ್​ ರೆಸಾರ್ಟ್​ನಲ್ಲಿ ನಡೆದ ಶಾಸಕರ ಜಟಾಪಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿರಿಯ ರಾಜಕಾರಣಿ, ಎಂಎಲ್​ಸಿ ಕೆ.ಸಿ ಕೊಂಡಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಪವರ್​ ಟಿವಿ ಜೊತೆ ಮಾತನಾಡಿದ ಅವರು ‘’ಇವರನ್ನು ಚಪ್ಪಲಿಯಲ್ಲಿ ಹೊಡೆದ್ರೂ ಬುದ್ದಿ ಬರಲ್ಲ. ಇವರಿಗೆ ದೇವರೇ ಬುದ್ದಿ ಕಲಿಸಬೇಕು, ರಾಜಕೀಯವನ್ನೇ ಅಸಹ್ಯಮಾಡಿದ್ರು. ಜನಸೇವೆ ಬದಲು ಈ ಶಾಸಕರು ಹೀಗೆ ಮಾಡ್ತಾರೆ. ಇವರುಗಳಿಗೆ ಬುದ್ಧಿ ಹೇಳೋಕೆ ಆಗಲ್ಲ. ನಾವು ಬುದ್ಧಿ ಹೇಳಿದ್ರೆ ನಮ್ಗೆ ಬಂದು ಹೊಡೆದರೂ ಆಶ್ಚರ್ಯವಿಲ್ಲ” ಎಂದಿದ್ದಾರೆ.
ಅಧಿಕಾರಿಗಳು ಮತ್ತು ಜನರ ನಡುವೆ ನಾವು ಸೇತುವೆ ಆಗಿರಬೇಕು. 1996 ರಿಂದ ನಾನು ಎಂ.ಪಿ. ಆಗಿ ಕೆಲಸ ಮಾಡುತ್ತಿದ್ದೇನೆ .ಈ ರೀತಿಯಾಗಿ ನಾನು ಯಾವತ್ತೂ ನೋಡಿಲ್ಲ. ಶಾಸಕರಾಗಿರುವುದು ಇವರ ಪುಣ್ಯ. ಆ ಸ್ಥಾನವನ್ನು ಸರಿಯಾಗಿ ನಿಭಾಯಿಸಬೇಕು ಅಂತ ಹೇಳಿದ್ದಾರೆ.

Exit mobile version