Site icon PowerTV

‘ಕೈ’ ಶಾಸಕರು ರೆಸಾರ್ಟ್​ಗೆ ಶಿಫ್ಟ್​: ಕಾಂಗ್ರೆಸ್​ನ್ನು ಕಾಡ್ತಿದ್ಯಾ ‘ಆಪರೇಷನ್​ ಕಮಲ’ದ ಭೀತಿ​..?

ಬೆಂಗಳೂರು: ಆಪರೇಷನ್‌ ಪಾಲಿಟಿಕ್ಸ್‌ ಸ್ಟಾರ್ಟ್‌ ಆದಾಗಿನಿಂದ ರಾಜ್ಯದ ಶಾಸಕರು ಸ್ವಕ್ಷೇತ್ರಗಳಲ್ಲಿ ಕಾಣಿಸ್ತಾನೇ ಇಲ್ಲ. ಬಿಜೆಪಿ ಶಾಸಕರ ಬೆನ್ನಲ್ಲೇ ಈಗ ಕಾಂಗ್ರೆಸ್ ರೆಸಾರ್ಟ್‌ ಪಾಲಿಟಿಕ್ಸ್‌ ನಡೆಸ್ತಾ ಇದೆ. ನಿನ್ನೆ ನಡೆದ ಸಿಎಲ್‌ಪಿ ಸಭೆ ಮುಗಿಯುತ್ತಿದ್ದಂತೆ ಕಾಂಗ್ರೆಸ್‌ನ 76 ಶಾಸಕರನ್ನು ರಾಮನಗರ ಜಿಲ್ಲೆ ಬಿಡದಿ ಬಳಿಯ ಈಗಲ್ಟನ್‌ ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿದೆ.

ರಾತ್ರೋರಾತ್ರಿ ಶಾಸಕರೆಲ್ಲ ಈಗಲ್ಟನ್‌ ರೆಸಾರ್ಟ್‌ಗೆ ತೆರಳಿದ್ದಾರೆ. ಇನ್ನೂ ಮೂರು ದಿನ ರೆಸಾರ್ಟ್‌ನಲ್ಲೇ ‘ಕೈ’ ಶಾಸಕರು ವಾಸ್ತವ್ಯ ಹೂಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಬರದ ಚರ್ಚೆ ನಡೆಸಲು ರೆಸಾರ್ಟ್‌ಗೆ ತೆರಳಿದ್ದಾರೆ ಅಂತಾ ಸ್ಪಷ್ಟನೆ ನೀಡಿದ್ದಾರೆ. ಇದರ ಜೊತೆಗೆ ಬಿಜೆಪಿ ಆಪರೇಷನ್‌ ಕಮಲದ ಭೀತಿಯೂ ಕಾಂಗ್ರೆಸ್ಸಿಗರನ್ನ ಕಾಡ್ತಿದೆ ಅನ್ನೋ ಅನುಮಾನ ಸಿದ್ದರಾಮಯ್ಯ ಅವರ ಮಾತಿನಲ್ಲೇ ಸ್ಪಷ್ಟವಾಗಿ ಗೋಚರಿಸ್ತು.

ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್‌ ಆಗಿದ್ದು, ಎರಡು ರೆಸಾರ್ಟ್‌ಗಳಲ್ಲಿ 76 ಶಾಸಕರು ವಾಸ್ತವ್ಯ ಹೂಡಿದ್ದಾರೆ. ಈಗಲ್ಟನ್‌ನಲ್ಲಿ 40, ವಂಡರ್‌ ಲಾ ರೆಸಾರ್ಟ್‌ನಲ್ಲಿ 30 ರೂಮ್‌ ಬುಕ್‌ ಮಾಡಲಾಗಿದೆ. ಸೋಮವಾರದವರೆಗೂ ಶಾಸಕರು ರೆಸಾರ್ಟ್‌ನಲ್ಲೇ ಉಳಿಯಲಿದ್ದಾರೆ.

Exit mobile version