Site icon PowerTV

ರಮೇಶ್ ಜಾರಕಿಹೊಳಿ ಮುಂಬೈನಲ್ಲಿ ಪ್ರತ್ಯಕ್ಷ!

ಅತೃಪ್ತ ಶಾಸಕ ರಮೇಶ್ ಜಾರಕಿ ಹೊಳಿ ಅಂತೂ ಇಂತು ಪ್ರತ್ಯಕ್ಷರಾಗಿದ್ದಾರೆ. ಕಳೆದ 15 ದಿನಗಳಿಂದ ಎಲ್ಲಿಯೂ ಕಾಣಿಸಿಕೊಂಡಿರದ ಶಾಸಕ ರಮೇಶ್ ಜಾರಕಿಹೊಳಿ ಮುಂಬೈನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮುಂಬೈನ ರಿನೈಸೆನ್ಸ್ ಹೋಟೆಲ್​ನಲ್ಲಿರುವ ಫೋಟೋ ಪವರ್ ಟಿವಿಗೆ ಲಭ್ಯವಾಗಿದೆ. ಹೋಟೆಲ್​ ಒಳಗಡೆ ಹೋಗುತ್ತಿರೋ ಫೋಟೋ ಇದಾಗಿದೆ.

ಆಪರೇಷನ್ ಕಮಲದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ್ದು, ಸಂಕ್ರಾಂತಿ ಕ್ರಾಂತಿ, ದೀಪಾವಳಿ ಪಟಾಕಿ ಠುಸ್ ಆಗಲಿದೆ. ಬಿಜೆಪಿ ಬಹಿರಂಗವಾಗಿ ಕುದುರೆ ವ್ಯಾಪಾರಕ್ಕೆ ಇಳಿದಿದೆ. ನಮ್ಮ ಶಾಸಕರ ಹೆಸರನ್ನು ಅನಾವಶ್ಯಕವಾಗಿ ಪ್ರಸ್ತಾಪಿಸಲಾಗುತ್ತಿದೆ.ವ ಬಿಜೆಪಿ ವಿಚಾರ ಮಾಧ್ಯಗಳಲ್ಲಿ ಚರ್ಚೆಯಾಗಬೇಕೇ ಹೊರತು ನಮ್ಮ ಸರ್ಕಾರದ ಬಗ್ಗೆ ಅಲ್ಲ’ ಎಂದಿದ್ದಾರೆ.

Exit mobile version