Site icon PowerTV

ಅಂಬರೀಶ್​​ ಕುಟುಂಬಕ್ಕೆ ಟಿಕೆಟ್ ಇಲ್ಲ..?!

ಲೋಕಸಭಾ ಚುನಾವಣೆ ವೇಳೆ ರೆಬಲ್‌ ಸ್ಟಾರ್‌ ಅಂಬರೀಶ್‌ ಕುಟುಂಬಕ್ಕೆ ಟಿಕೆಟ್‌ ಇಲ್ಲ ಅನ್ನೋದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಟಿಕೆಟ್‌ ವಿಚಾರಕ್ಕೆ ಹೋರಾಟ ನಡೆಸಲು ಇದು ಮಹಾಭಾರತದ ಕುರುಕ್ಷೇತ್ರವಲ್ಲ. ಜನಾಭಿಪ್ರಾಯ ಸಂಗ್ರಹಿಸಿ ಟಿಕೆಟ್‌ ಘೋಷಣೆ ಮಾಡ್ತೀವಿ ಅಂದ್ರು. ಇತ್ತೀಚಿಗಷ್ಟೇ ಮಂಡ್ಯದಲ್ಲಿ ನಡೆದ ಅಂಬಿ ನುಡಿ ನಮನ ಕಾರ್ಯಕ್ರಮದಲ್ಲಿ ಸುಮಲತಾ ಅಥವಾ ಅಂಬಿ ಪುತ್ರ ಅಭಿಷೇಕ್‌ ರಾಜಕೀಯ ಪ್ರವೇಶದ ವಿಚಾರ ಚರ್ಚೆಯಾಗಿತ್ತು. ಮಂಡ್ಯದಿಂದಲೇ ಅಭಿಷೇಕ್‌ ಕಣಕ್ಕೆ ಇಳೀತಾರೆ ಅನ್ನೋ ಮಾತುಗಳೂ ಸಹ ಕೇಳಿ ಬಂದಿತ್ತು. ಇನ್ನೊಂದೆಡೆ ಅದೇ ಮಂಡ್ಯದಿಂದ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್‌ ಲೋಕಸಭೆಗೆ ಸ್ಪರ್ಧಿಸುತ್ತಾರೆ ಅಂತಲೂ ಹೇಳಲಾಗುತ್ತಿದೆ. ಆದರೆ ನಿಖಿಲ್‌ ಸ್ಪರ್ಧೆ ಬಗ್ಗೆಯೂ ಇನ್ನೂ ತೀರ್ಮಾನವಾಗಿಲ್ಲ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ.

 

Exit mobile version