Site icon PowerTV

ರೆಸಾರ್ಟ್​ನಲ್ಲಿ ಬಿಜೆಪಿ ಶಾಸಕರು ರಿಲಾಕ್ಸ್​..!

ಐಟಿಸಿ ಗ್ರ್ಯಾಂಡ್ ಭಾರತ್​​ ರೆಸಾರ್ಟ್​​ನಲ್ಲಿ ರಾಜ್ಯ ಬಿಜೆಪಿ ನಾಯಕರು ರಿಲ್ಯಾಕ್ಸ್​ ಆಗಿದ್ದಾರೆ. ರೆಸಾರ್ಟ್​ನಲ್ಲಿ ಶಾಸಕರು ತಂಗಿರುವ ಎಕ್ಸ್​​ಕ್ಲೂಸಿವ್ ಮಾಹಿತಿ ಪವರ್​ ಟಿವಿಗೆ ಲಭ್ಯವಾಗಿದೆ.

ರೆಸಾರ್ಟ್​​​ನಲ್ಲಿ ಬಿಜೆಪಿ ಶಾಸಕರು ಆರಾಮಾಗಿ ಓಡಾಡಿಕೊಂಡಿದ್ದಾರೆ. ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಜೊತೆ ಬಿಜೆಪಿ ಶಾಸಕರು ಬ್ರೇಕ್​​ಫಾಸ್ಟ್ ಮಾಡಿದ್ದಾರೆ. ಶಾಸಕರ ಜತೆ ಸಭೆ ಬಿಎಸ್​ವೈ ಸಭೆ ನಡೆಸಲಿದ್ದಾರೆ. ಈಗಾಗಲೇ ಅನೌಪಚಾರಿಕ ಸಭೆ ನಡೆದಿದೆ.

ಮಾಹಿತಿ ಹೊರಹೋಗದಂತೆ ಐಟಿಸಿ ಗ್ರ್ಯಾಂಡ್ ಭಾರತ್ ಸಿಬ್ಬಂದಿಗೆ ಆಡಳಿತ ವರ್ಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸಿಬ್ಬಂದಿ ಚಲನವಲನಗಳ ಬಗ್ಗೆ ನಿಗಾ ಇಟ್ಟಿರುವ ಆಡಳಿತ ವರ್ಗ, ಮೊಬೈಲ್ ಒಳಗೆ ತೆಗೆದುಕೊಂಡು ಹೋಗದಂತೆ ಸೂಚನೆ ನೀಡಿದೆ. ಗೌಪ್ಯ ಕಾಪಾಡುವಲ್ಲಿ ಬಿಜೆಪಿ ನಾಯಕರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದಾರೆ.

Exit mobile version