Site icon PowerTV

ಪಕ್ಷ ಬಿಟ್ಟು ಹೊರಬನ್ನಿ: ಬಿ.ಸಿ.ಪಾಟೀಲ್​ಗೆ ಬೆಂಬಲಿಗರ ಒತ್ತಾಯ

ಶಾಸಕ ಬಿ.ಸಿ ಪಾಟೀಲ್​ಗೆ ಸಚಿವ ಸ್ಥಾನ ಸಿಗದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರ ಬೆಂಬಲಿಗರು ಪಕ್ಷ ಬಿಟ್ಟು ಹೊರಬನ್ನಿ ಅಂತ ಒತ್ತಾಯಿಸಿದ್ದಾರೆ. ಶಾಸಕ ಬಿ.ಸಿ.ಪಾಟೀಲ್​ಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅವರ ನಿವಾಸದ ಎದುರು ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿರುವ ಬಿ.ಸಿ.ಪಾಟೀಲ್​ ನಿವಾಸದ ಮುಂದೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೇ ಕಾಂಗ್ರೆಸ್ ಪಕ್ಷ ಬಿಟ್ಟು ಹೊರಬನ್ನಿ ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬಿ.ಸಿ.ಪಾಟೀಲ್,”​ ಈ ಬಾರಿ ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ಆದರೆ ಸಿಕ್ಕಿಲ್ಲ, ಹಾಗಂತ ಬಿಜೆಪಿ ಸೇರಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ನಂಬಿಕೆ ಇತ್ತು. ಆದರೆ ಸಿದ್ದರಾಮಯ್ಯ ನನ್ನನ್ನು ಕೈಬಿಟ್ಟಿದ್ದಾರೆ” ಎಂದಿದ್ದಾರೆ.

“ಹಾವೇರಿ ಜಿಲ್ಲೆಯ ಏಕೈಕ ‘ಕೈ’ ಶಾಸಕ ನಾನು. ನಾನು ಬಂದ್ಮೇಲೆ ಕಾಂಗ್ರೆಸ್​ ಪಕ್ಷ ಬೆಳೆಸಿದ್ದೇನೆ. ಸದ್ಯ ಯಾರ ಜೊತೆಯೂ ಚರ್ಚೆ ನಡೆಸಿಲ್ಲ. ಮುಂದಿನ ನಡೆ ಕಾದು ನೋಡಿ” ಅಂತ ಹಿರೇಕೆರೂರಿನಲ್ಲಿ ಶಾಸಕ ಬಿ.ಸಿ.ಪಾಟೀಲ್​ ಹೇಳಿಕೆ ನೀಡಿದ್ದಾರೆ.

Exit mobile version