Site icon PowerTV

8.4 ಕೋಟಿಗೆ ರಾಯಲ್ಸ್​​ನಲ್ಲೇ ಉಳಿದ ಉನಾದ್ಕತ್!

2019ರ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಪಿಂಕ್ ಸಿಟಿ ಜೈಪುರದಲ್ಲಿ ನಡೆಯುತ್ತಿರೋ ಹರಾಜಿನಲ್ಲಿ ಫ್ರಾಂಚೈಸಿಗಳು ಯುವ ಆಟಗಾರರತ್ತ ಒಲವು ತೋರ್ತಿದ್ದಾರೆ.
ಸೌರಾಷ್ಟ್ರದ ಫಾಸ್ಟ್ ಬೌಲರ್ ಜಯದೇವ್ ಉನಾದ್ಕತ್ ಅವರನ್ನು ರಾಜಸ್ಥಾನ ರಾಯಲ್ಸ್ 8.4 ಕೋಟಿ ರೂಗಳಿಗೆ ತನ್ನಲ್ಲೇ ಉಳಿಸಿಕೊಂಡಿದೆ. ಯುವ ವೇಗಿ ಉನಾದ್ಕತ್ ಕಳೆದ ಬಾರಿ 11.5 ಕೋಟಿ ರೂಪಾಯಿಗಳಿಗೆ ಸೇಲ್ ಆಗಿ ರಾಜಸ್ಥಾನ್ ಪರ ಆಡಿದ್ದರು. ಈ ಬಾರಿಯೂ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಇವರನ್ನು ಮತ್ತೆ ರಾಜಸ್ಥಾನ್ ರಾಯಲ್ಸ್ ಖರೀದಿಸಿದೆ. ಕಳೆದ ಬಾರಿ 11.5 ಕೋಟಿ ರೂಗಳಿಗೆ ರಾಯಲ್ಸ್ ಪಾಲಾಗಿದ್ದ ಉನಾದ್ಕತ್ ಈ ಬಾರಿ 8.4 ಕೋಟಿಗೆ ಅದೇ ಟೀಮ್​ ಗೆ ಸೇಲಾಗಿದ್ದಾರೆ.

Exit mobile version