Site icon PowerTV

ವಿಷಪ್ರಸಾದದಿಂದ ಜನ ಸಾಯ್ತಾ ಇದ್ರೆ, ಆರೋಗ್ಯ ಸಚಿವರಿಗೆ ಇದ್ಯಾವ್ದೂ ಗೊತ್ತಿಲ್ವಂತೆ..!

ಸುಳ್ವಾಡಿ ಗ್ರಾಮದಲ್ಲಿ ವಿಷ ಪ್ರಸಾದ ಸೇವಿಸಿ 13 ಮಂದಿ ಪ್ರಾಣ ಬಿಟ್ಟಿದ್ರೆ, ಆರೋಗ್ಯ ಸಚಿವರಿಗೆ ಮಾತ್ರ ಇದ್ಯಾವುದೂ ಗೊತ್ತೇ ಇಲ್ವಂತೆ. ಹೀಗಂತಾ ಸ್ವತಃ ಆರೋಗ್ಯ ಸಚಿವ ಶಿವಾನಂದ ಪಾಟೀಲರೇ ಉಡಾಫೆ ಉತ್ತರ ಕೊಟ್ಟಿದ್ದಾರೆ.

“ವಿಷ ಪ್ರಸಾದ ಸೇವಿಸಿ ಜನರು ಹೀಗೆ ಪ್ರಾಣ ಬಿಟ್ಟಿದ್ದಾರೆ. ನೀವು ಇವತ್ತು ಬಂದಿದ್ದೀರಲ್ಲ” ಅಂತಾ ಪ್ರಶ್ನೆ ಮಾಡಿದ್ರೆ, ಸಚಿವರು ಘಟನೆ ಬಗ್ಗೆ ನನಗೆ ತಿಳಿದಿದ್ದೇ ನಿನ್ನೆ ಸಂಜೆ 4 ಗಂಟೆಗೆ ಅಂತಾರೆ. ಅಲ್ದೇ ನನಗೆ ವಿಷ್ಯ ತಿಳಿದಾಗ ನಾನು ವಿಜಯಪುರದಲ್ಲಿದ್ದೆ. ಅಲ್ಲಿಂದ ಬರೋದಕ್ಕೆ ಟೈಮ್‌ ಆಗುತ್ತಪ್ಪ ಅನ್ನೋ ಉತ್ತರ ಕೊಡ್ತಾರೆ.

ಗಂಭೀರ ಪ್ರಕರಣದ ಬಗ್ಗೆ ಆರೋಗ್ಯ ಸಚಿವರು ಅಜ್ಞಾನ ಪ್ರದರ್ಶಿಸಿದ್ದಾರೆ. ಘಟನೆ ಬಗ್ಗೆ ಉಡಾಫೆಯಾಗಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ್​​​​ 44 ಗಂಟೆ ತಡವಾಗಿ ಬಂದಿದ್ದೂ ಅಲ್ಲದೆ ತಮ್ಮ ನಡೆಯನ್ನೂ ಸಮರ್ಥಿಸಿಕೊಂಡಿದ್ದಾರೆ. “ಮುಖ್ಯಮಂತ್ರಿಗಳೇ ಘಟನಾ ಸ್ಥಳಕ್ಕೆ ಭೇಟಿ ನೀಡಿರುವಾಗ ನಾನು ಇಲ್ಲಿ ಬಂದು ಮಾಡೋದೇನಿದೆ” ಅನ್ನೋ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಇಡೀ ರಾಜ್ಯವೇ ಭಕ್ತರ ಸಾವನ್ನ ಕಂಡು ಮರುಗುತ್ತಿದ್ರೆ, ಆರೋಗ್ಯ ಸಚಿವರಿಗೆ ಮಾತ್ರ ಇದ್ಯಾವುದೂ ಗೊತ್ತೇ ಇಲ್ಲ ಅನ್ನೋದು ವಿಪರ್ಯಾಸ..!

Exit mobile version