Site icon PowerTV

ಕುಡಿಯೋಕೆ ಹಣ ಕೊಟ್ಟಿಲ್ಲಾಂತ ತಾಯಿಗೇ ಬೆಂಕಿ ಹಚ್ದ..!

ಕುಡಿಯಲು ಹಣ ಕೊಡಲಿಲ್ಲ ಅಂತ ಮಗನೊಬ್ಬ ತಾಯಿಗೆ ಬೆಂಕಿ ಹಚ್ಚಿರುವ ಘಟನೆ ಅಶ್ವತ್ ನಗರದಲ್ಲಿ ನಡೆದಿದೆ. ಕುಡಿಯೋಕೆ ಹಣ ಬೇಕೆಂದು ತಾಯಿಯನ್ನು ಪೀಡಿಸಿದಾಗ ಹಣ ನೀಡಲು ತಾಯಿ ನಿರಾಕರಿಸಿದ್ದಾರೆ. ಸಿಟ್ಟಿಗೆದ್ದ ಮಗ ಹೆತ್ತ ತಾಯಿಗೇ ಬೆಂಕಿ ಹಚ್ಚಿದ್ದಾನೆ.

ಅಶ್ವತ್​ ನಗರದ ಉತ್ತಮ್ ಕುಮಾರ್ ತಾಯಿ ಭಾರತಿಗೆ ಬೆಂಕಿ ಹಚ್ಚಿದ ಮಗ. ಪತ್ನಿ ಚೀರಾಟ ಕೇಳಿ ಓಡಿ ಬಂದ ಪತಿರಾಯ ಬೆಡ್ ಶೀಟ್​ನಿಂದ ಬೆಂಕಿ ಆರಿಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಉತ್ತಮ್​ ವಿರುದ್ಧ ಸೆಕ್ಷನ್ ೩೦೭ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತಮ್​ಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

Exit mobile version