Site icon PowerTV

ದಿನೇಶ್ ಗುಂಡೂರಾವ್ ಪೇಪರ್ ಟೈಗರ್ ಇದ್ದಂತೆ: ಈಶ್ವರಪ್ಪ

ದಿನೇಶ್ ಗುಂಡೂರಾವ್ ಪೇಪರ್ ಟೈಗರ್ ಇದ್ದಂತೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಟೀಕಿಸಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ದಿನೇಶ್ ಗುಂಡೂರಾವ್ ಒಬ್ಬ ಪೇಪರ್ ಟೈಗರ್ ಇದ್ದ ಹಾಗೆ. ಇನ್ನು ಮುಂದೆ ಅಶಿಸ್ತಿನ ಹೇಳಿಕೆಗಳು ಕೇಳಿಬಂದರೆ ಅದರ ಬಗ್ಗೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಈಗಾಗಲೆ ಸತೀಶ್ ಜಾರಕೀಹೊಳಿಯವರು ಕಾಂಗ್ರೆಸ್ನಲ್ಲಿ 8 ಜನ ಅತೃಪ್ತ ಶಾಸಕರಿದ್ದಾರೆ ಎಂದು ಹೇಳಿದ್ದಾರೆ. “ತಾವಾಗಿಯೇ ನಮ್ಮ ಪಕ್ಷಕ್ಕೆ ಬರುತ್ತೇವೆ ಎಂದರೆ ಬರಲಿ. ಬೇಡ ಎನ್ನುವುದಕ್ಕೆ ನಾವೇನು ಸನ್ಯಾಸಿಗಳಾ” ಅಂತ ಈಶ್ವರಪ್ಪ ಪ್ರಶ್ನೆಮಾಡಿದ್ದಾರೆ. “ಕಾಂಗ್ರೆಸ್ನಲ್ಲಿ ಈಗಾಗಲೆ ಕೆಲವು ಶಾಸಕರಿಗೆ ಅಸಮಧಾನವಿದೆ. ನಾವು ಕಾಂಗ್ರೆಸ್ನಿಂದ ಆಪರೇಶನ್ ಕಮಲ ಮಾಡುತ್ತೇವೆ” ಎಂದಿದ್ದಾರೆ.

Exit mobile version