Site icon PowerTV

ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹೆಡೆಮುರಿ ಕಟ್ಟಿದ ಯೋಧರು

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಭಾರತೀಯ ಯೋಧರು ಸರಿಯಾಗಿಯೇ ಪಾಠ ಕಲಿಸ್ತಿದ್ದಾರೆ. ಇದೀಗ ಮತ್ತೊಮ್ಮೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಭಾರತದ ಯೋಧರು.

ಪುಲ್ವಾಮಾ ಜಿಲ್ಲೆಯ ಆವಂತಿಪೋರಾ ಪ್ರದೇಶದ ಶಾರ್ಷಾಲ್ ನಲ್ಲಿ ಸೇನೆ ಮೇಲೆ ದಾಳಿ ಮಾಡಲು ಪ್ರಯತ್ನಪಟ್ಟ ಇಬ್ಬರು ಉಗ್ರರನ್ನು ಸೈನಿಕರು ಸದೆಬಡಿದಿದ್ದಾರೆ. ಉಗ್ರರ ಶವಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಸೇನೆ ವಶಪಡಿಸಿಕೊಂಡಿದೆ. ಇನ್ನೂ ಹೆಚ್ಚಿನ ಉಗ್ರರು ಅಡಗಿರುವ ಶಂಕೆ ಇದ್ದು, ಸೈನಿಕರು ಉಗ್ರರ ಹುಟ್ಟಡಗಿಸಲು ಶೋಧ ನಡೆಸ್ತಾ ಇದ್ದಾರೆ.

Exit mobile version