‘ನಾನು ಸನ್ಯಾಸ ಸ್ವೀಕರಿಸಲ್ಲ’ ಅಂತ ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.
ಶೋಭಾ ಅವರು ಸನ್ಯಾಸತ್ವ ಸ್ವೀಕರಿಸ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಪವರ್ ಟಿವಿ ನೇರವಾಗಿ ಶೋಭಾ ಅವರನ್ನೇ ಸಂಪರ್ಕಿಸಿ. ಈ ಬಗ್ಗೆ ಪ್ರತಿಕ್ರಿಯೆ ಪಡೆದಿದೆ.
ಸುಮ್ನೆ ಎಲ್ಲೆಲ್ಲೋ ಸಂತೆಯಲ್ಲಿ ಹರಿದಾಡೋ ಅಂತೆ-ಕಂತೆ ಸುದ್ದಿಗಳನ್ನು ಜನರಿಗೆ ತಲುಪಿಸೋ ಕೆಲಸವನ್ನು ಯಾವತ್ತೂ ಮಾಡಲ್ಲ ಅಂತ ಪವರ್ ಟಿವಿ ಆರಂಭದಲ್ಲೇ ಶಪಥ ಮಾಡಿದೆ. ಆಡಿದ ಮಾತಿಗೆ ತಕ್ಕಂತೆ ಡೇ ಒನ್ ನಿಂದಲೂ ನಡೆದುಕೊಂಡು ಬರ್ತಾ ಇದೆ.
ಇದಕ್ಕೆ ಮತ್ತೊಂದು ಉದಾಹರಣೆ ಶೋಭಾ ಕರಂದ್ಲಾಜೆ ಸನ್ಯಾಸ ಸ್ವೀಕಾರ ಮಾಡ್ತಾರೆ ಅನ್ನೋ ವಿಷ್ಯದ ಬಗ್ಗೆ ಅವರಿಂದಲೇ ಜನರಿಗೆ ಸ್ಪಷ್ಟನೆ ಕೊಡಿಸಿರೋದು.
ಶೋಭಾ ಕರಂದ್ಲಾಜೆ ಅವರ ಜೊತೆ ಪವರ್ ಟಿವಿಯ ಎಕ್ಸಿಕ್ಯೂಟಿವ್ ಎಡಿಟರ್ ಚಂದನ್ ಶರ್ಮಾ ಅವರು ನಡೆಸಿದ ದೂರವಾಣಿ ಸಂಭಾಷಣೆ ಇಲ್ಲಿದೆ.