Site icon PowerTV

ಅಭಿಮಾನಿಯ ಸಾವಿಗೆ ಸುದೀಪ್ ಸಂತಾಪ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುಟ್ಟ ಅಭಿಮಾನಿ ಆದಿತ್ಯ ವಿಧಿವಶರಾಗಿದ್ದಾರೆ. ಅಭಿಮಾನಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆ ಕಿಚ್ಚ ಕಂಬನಿ ಮಿಡಿದಿದ್ದು, ಟ್ವೀಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.
ಬಾಲಕ ಆದಿತ್ಯಗೆ ಸುದೀಪ್ ಅಂದ್ರೆ ಅಚ್ಚು-ಮೆಚ್ಚು. ಸುದೀಪ್ ಅವರ ದೊಡ್ಡ ಅಭಿಮಾನಿ ಆಗಿದ್ದ ಆದಿತ್ಯ ಅಪರೂಪದ, ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದರು. 2014ರಲ್ಲಿ ಮೈಸೂರಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ವೇಳೆ ಆದಿತ್ಯ ಸುದೀಪ್ ಅವರನ್ನು ಭೇಟಿ ಮಾಡಿ ತನ್ನ ಆಸೆ, ಕನಸುಗಳನ್ನು ಹೇಳಿಕೊಂಡಿದ್ದರು.
”ಆದಿತ್ಯ ಇನ್ನಿಲ್ಲ ಅನ್ನೋ ವಿಚಾರ ಕೇಳಿ ಬಹಳ ಬೇಸರವಾಗ್ತಿದೆ. ಆ ಬಾಲಕನೊಂದಿಗೆ ಕಳೆದ ಕ್ಷಣಗಳನ್ನು ಎಂದಿಗೂ ಮರೆಲು ಸಾಧ್ಯವಿಲ್ಲ. ಆತನ ಆತ್ಮಕ್ಕೆ ಶಾಂತಿ ಸಿಗಲಿ” ಅಂತ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

Exit mobile version