Site icon PowerTV

ಬಿಎಸ್ ವೈ ಬದಲಾವಣೆ ಬಗ್ಗೆ ಹೈಕಮಾಂಡ್ ನೀಡಿದ ಸೂಚನೆ ಏನ್ ಗೊತ್ತಾ..?

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್ ಯಡಿಯೂರಪ್ಪನವರೇ ಮುಂದುವರೆಯಲಿದ್ದಾರೆ. ಬಿಎಸ್ ವೈ ಅವರನ್ನೇ ಮುಂದುವರೆಸಲು ಹೈಕಮಾಂಡ್ ನಿರ್ಧರಿಸಿದೆ. ಸದ್ಯ ಮಧ್ಯಪ್ರದೇಶ ಚುನಾವಣೆಯಲ್ಲಿ ಬ್ಯುಸಿ ಇರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಾಲ್ಕು ರಾಜ್ಯಗಳ ಚುನಾವಣೆ ಬಳಿಕ ಕರ್ನಾಟಕದತ್ತ ಚಿತ್ತ ಹರಿಸಲಿದ್ದಾರೆ.
ಬಿಎಸ್ ವೈ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸುವ ಬಗ್ಗೆ ಚುನಾವಣೆ ಬಳಿಕ ಅಧಿಕೃತ ಹೇಳಿಕೆ ನೀಡಲಿದ್ದಾರೆ ಅಮಿತ್ ಶಾ. ಲೋಕಸಭಾ ಚುನಾವಣೆಗೆ ತೊಂದರೆ ಆಗಬಾರದು. ಬಿಎಸ್ ವೈ ಸೂಕ್ತ ನಾಯಕರೆಂಬುದು ದೆಹಲಿ ನಾಯಕರ ಅರಿವಿಗೆ ಬಂದಿದ್ದು, ಸದ್ಯಕ್ಕೆ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಲು ತೀರ್ಮಾನಿಸಿದ್ದಾರೆ.

Exit mobile version